ಬಣ್ಣ ಬಣ್ಣದ ಕಾಗೆ ಹಾರಿಸಬೇಡಿ, ಇಂಥದ್ದನ್ನೆಲ್ಲ ತುಂಬಾ ನೋಡಿದ್ದೇವೆ: ಯೋಗೇಶ್ವರ್​ ವಿರುದ್ಧ ಪ್ರತಾಪ್‌ ಸಿಂಹ ಗರಂ

cpy- pratap simha
Published on

ಮೈಸೂರು: ಪ್ರವಾಸೋದ್ಯಮ ಇಲಾಖೆಯವರು ಬಣ್ಣ ಬಣ್ಣದ ಕಾಗೆ ಹಾರಿಸಬಾರದು. ಮಂಡ್ಯದಲ್ಲಿ ಡಿಸ್ನಿ ಲ್ಯಾಂಡ್, ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡ್ತೀವಿ ಅಂತಾರೆ. ಇಂಥವೆಲ್ಲ ನಾವೂ ತುಂಬಾ ನೋಡಿದ್ದೇವೆ ಎಂದು ಸಚಿವ ಸಿ‌.ಪಿ.ಯೋಗೇಶ್ವರ್‌ಗೆ ಸಂಸದ ಪ್ರತಾಪ್​ ಸಿಂಹ ಟಾಂಗ್​ ಕೊಟ್ಟಿದ್ದಾರೆ.

ಮೈಸೂರಿನಿಂದ ಕಾರವಾರ, ಬಳ್ಳಾರಿ, ಬೆಂಗಳೂರಿಗೆ ಹೆಲಿಕಾಪ್ಟರ್ ಸೇವೆ ಶುರು ಮಾಡುತ್ತೇವೆ ಅಂತೀರಿ. ಮೈಸೂರಿನಿಂದ ಕಾರವಾರಕ್ಕೆ ಹೋಗಿ ನೋಡುವುದು ಏನಿದೆ? ದಸರಾ ಸಂದರ್ಭದಲ್ಲಿ ಮಾಡುವ ಹೆಲಿರೈಡ್‌ಗೇ ಜನರ ಬರೋದಿಲ್ಲ. ಯೋಜನೆ ರೂಪಿಸುವ ಮುನ್ನ ಇದೆಲ್ಲವನ್ನೂ ಗಮನಿಸಬೇಕು. ಇಷ್ಟಾಗಿಯೂ ನಿಮಗೆ ಹೆಲಿಕಾಪ್ಟರ್ ಹಾರಿಸಬೇಕು ಅನ್ನಿಸಿದರೆ ಬನ್ನಿ ವಿಮಾನ ನಿಲ್ದಾಣದಲ್ಲಿ ನಾವೇ ಜಾಗ ಕೊಡುತ್ತೇವೆ. ರಾಜವಂಶಸ್ಥರಿಗೆ ಸೇರಿದ ಹೆಲಿಪ್ಯಾಡ್ ಇದೆ. ಅದನ್ನು ಬಾಡಿಗೆ, ಭೋಗ್ಯಕ್ಕೆ ಕೇಳಿದ್ರೆ ಕೊಡಲ್ಲ ಅಂತಾರಾ? ಎಂದು ಪ್ರತಾಪ್​ ಸಿಂಹ ಹೇಳಿದರು. ಇದನ್ನೂ ಓದಿರಿ VIDEO| ಹಾವಿನ ಜತೆ ಸರಸವಾಡಲು ಹೋದ ಯುವಕ ಸಾವು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

ಎರಡು ಸಲ ಪ್ರಚಾರಕ್ಕೆ ಅಂತ ಮಾತಾಡ್ತಾರೆ. ಎರಡು ವರ್ಷ ಆದ್ಮೇಲೆ ಸಚಿವರು ಬದಲಾಗುತ್ತಾರೆ. ಆ ಮೇಲೆ ಎಲ್ಲವೂ ಮರೆತು ಹೋಗುತ್ತೆ. ಹೆಲಿ ಟೂರಿಸಂ ಅನ್ನುವ ಪದ ಮಾತ್ರ ಕೇಳಿದ್ದೇವೆ. ಆ ಯೋಜನೆ ರೂಪುರೇಷೆ ಏನು? ನಿಮ್ಮ ಬಳಿ ವಿಷನ್ ಡಾಕ್ಯುಮೆಂಟ್ ಎಲ್ಲಿದೆ? ಯಾವ ಘನಕಾರ್ಯ ಮಾಡ್ತೀರಿ ಅಂತ ನಮಗೂ ಹೇಳಿ ಎಂದು ಪ್ರತಾಪ್​ ಸಿಂಹ ಕಿಡಿಕಾರಿದರು.

ಹೆಲಿ ಟೂರಿಸಂ‌ಗೆ ನನ್ನ ವಿರೋಧ ಇದೆ. ಈ ಸಂಬಂಧ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತನಾಡುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net