ಬಾಲಕಿ ಮೇಲೆ ಅತ್ಯಾಚಾರ: ತಿಪ್ಪೇಗುಂಡಿಯಿಂದ ಮಗುವಿನ ಶವ ಹೊರತೆಗೆದು ಡಿಎನ್​ಎ ಟೆಸ್ಟ್

Baby
Published on

ದೇವನಹಳ್ಳಿ(ವಿಜಯಪುರ): ಅಪ್ರಾಪ್ತೆಯನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡು ನಾಪತ್ತೆಯಾಗಿದ್ದ ಆರೋಪಿಯನ್ನ ವಿಜಯಪುರ ಠಾಣೆ ಪೊಲೀಸರು ಬಂಧಿಸಿದ್ದು, ತಿಪ್ಪೇಗುಂಡಿಯಲ್ಲಿ ಹೂತಿದ್ದ ನವಜಾತ ಶಿಶುವಿನ ಶವವನ್ನ ಹೊರತೆಗೆದು ಡಿಎನ್​ಎ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ.

ಗಾರೆಕೆಲಸ ಮಾಡುತ್ತಿದ್ದ ಚಿಂತಾಮಣಿ ಯುವಕನೊಬ್ಬ ಜತೆಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದ. ಬಾಲಕಿ ಗರ್ಭಿಣಿಯಾದ ವಿಷಯ ತಿಳಿದ ಬಳಿಕ ಕಾಣೆಯಾಗಿದ್ದ. ಪ್ರಸವದ ವೇಳೆಯೇ ಮಗು ಮೃತಪಟ್ಟಿತ್ತು. ಬಳಿಕ ತಿಪ್ಪೆಗುಂಡೆಯಲ್ಲೇ ಅಂತ್ಯಸಂಸ್ಕಾರ ಮಾಡಲಾಗಿತ್ತು.

ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಕೋಲಾರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇತ್ತೀಚಿಗೆ ಬಂಧಿಸಿದ್ದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಿಪ್ಪೇಗುಂಡಿಯಲ್ಲಿ ಹೂತಿದ್ದ ನವಜಾತ ಶಿಶುವಿನ ಶವವನ್ನ ತಹಸೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ವೈದ್ಯ ಡಾ. ಭಗವಾನ್, ಪಿಎಸ್​ಐ ನಂದೀಶ್ ಸಮ್ಮುಖದಲ್ಲಿ ಮಗುವಿನ ಶವ ಹೊರತೆಗೆದು ಡಿಎನ್​ಎ ಪರೀಕ್ಷೆಗೆ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net