ಹಾಡಹಗಲೇ ಬೆಂಗಳೂರಲ್ಲಿ ಪೊಲೀಸರ ಬೈಕ್​ ಅನ್ನೇ ಕದ್ದೊಯ್ದ ಖತರ್ನಾಕ್​ ಕಳ್ಳ!

New Project(13)
Published on

ಬೆಂಗಳೂರು: ಕಳ್ಳನೊಬ್ಬ ಪೊಲೀಸ್ ಪೇದೆಯೊಬ್ಬರ ಬೈಕ್​ ಅನ್ನೇ ಕದ್ದೊಯ್ದ ಘಟನೆ ಕೋರಮಂಗಲದ ಮಹಾರಾಜ ಸಿಗ್ನಲ್ ಬಳಿ ಸಂಭವಿಸಿದೆ. ಕಳ್ಳನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೆಎಸ್​ಆರ್​ಪಿ 4ನೇ ಬೆಟಾಲಿಯನ್ ಮುಖ್ಯಪೇದೆ ಉಮೇಶ್ ಎಂಬುವವರ ಬೈಕ್ ಕಳ್ಳತನವಾಗಿದೆ. ಫೆ.9ರಂದು ಕೆಲಸದ ನಿಮಿತ್ತ ಖಾಸಗಿ ಬ್ಯಾಂಕ್​ಗೆ ಆಗಮಿಸಿದ್ದ ಉಮೇಶ್​, ರಸ್ತೆಬದಿ ಬೈಕ್ ನಿಲ್ಲಿಸಿ ಬ್ಯಾಂಕ್ ಒಳಗೆ ಹೋಗಿದ್ದರು. ವಾಪಸ್​ ಬರುವಷ್ಟರಲ್ಲಿ ಬೈಕ್ ಸಮೇತ ಕಳ್ಳ ಪರಾರಿಯಾಗಿದ್ದಾನೆ.

ಕೋರಮಂಗಲ ಪೊಲೀಸ್​ ಠಾಣೆಗೆ ಉಮೇಶ್​ ದೂರು ನೀಡಿದ್ದು, ಬೈಕ್ ಕಳ್ಳನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net