ಬೆಂಗಳೂರಲ್ಲಿ ಮೋದಿ ಮೇನಿಯಾ: ರಸ್ತೆಯುದ್ದಕ್ಕೂ ಜೈಕಾರ

modi in banglore
Published on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ 'ಮೋದಿ ಮೇನಿಯಾ' ಮೊಳಗುತ್ತಿದೆ. ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಕರ್ನಾಟಕಕ್ಕೆ ಆಗಮಿಸಿರುವ ಮೋದಿ ಅವರನ್ನ ಕಣ್ತುಂಬಿಕೊಳ್ಳಲು ಜನಸಾಗರವೇ ಸೇರಿದೆ.

ಸೋಮವಾರ ಮಧ್ಯಾಹ್ನ 12.3ಕ್ಕೆ ಯಲಹಂಕ ವೈಮಾನಿಕ ವಾಯುನೆಲೆಗೆ ವಿಶೇಷ ವಿಮಾನದಲ್ಲಿ ಬಂದಿಳಿಸ ಪ್ರಧಾನಿ ಅವರು ನೇರವಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಮೆದುಳು ಸಂಶೋಧನಾ ಕೇಂದ್ರಕ್ಕೆ ತೆರಳಿದರು. 280 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬ್ರೇನ್​ ರಿಸರ್ಚ್ ಸೆಂಟರ್​ ಅನ್ನು ಉದ್ಘಾಟಿದರು. ಮೋದಿ ಸಂಚರಿಸುವ ರಸ್ತೆಯುದ್ದಕ್ಕೂ ಜಾಮವಣೆಗೊಂಡಿರುವ ಸಾವಿರಾರು ಕಾರ್ಯಕರ್ತರು, ಸಾರ್ವಜನಿಕರು 'ಮೋದಿ, ಮೋದಿ, ಜೈ ಶ್ರೀರಾಮ್​...' ಘೋಷಣೆ ಕೂಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.

ಸದಾಶಿವನಗರ ಸ್ನಿಗಲ್ ಬಳಿ (ಕಾರ್ಯಕರ್ತರಿದ್ದ ಸ್ಥಳ) ಕಾರು ಸ್ಲೋ ಮಾಡಿ ಸಂಶೋಧನಾ ಕೇಂದ್ರದತ್ತ ತೆರಳುತ್ತಲೇ ಕಾರಿನಲ್ಲೇ ನಿಂತು ಜನರತ್ತ ಕೈಬೀಸಿ ನಮಸ್ಕರಿಸುತ್ತಿದ್ದಂತೆ ಜನರಿಂದ ಹರ್ಷೋದ್ಘಾರ ಮೊಳಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net