ಚನ್ನಪಟ್ಟಣ: ತಾಲೂಕಿನ ಕೆಲಗೆರೆ ಗ್ರಾಮದಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಸೈಬರ್ ವಂಚನೆ ಜಾಲಕ್ಕೆ ಸಿಲುಕಿದ ವ್ಯಕ್ತಿಯೊಬ್ಬ ವಂಚಕರ ಕಾಟ ತಡೆಯಲಾರದೆ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗ್ರಾಮದ ಕಾಡೇಗೌಡ ಅವರ ಪುತ್ರ ಕೆ.ಕುಮಾರ್ (48) ಮೃತ. ವಂಚನೆಯ ಬಗ್ಗೆ ಡೆತ್ ನೋಟ್ ಬರೆದಿಟ್ಟು, ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಸಂಬಂಧ ಎಂ.ಕೆ.ದೊಡ್ಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಿ, ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ. ಮಂಗಳವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
ಏನಿದು ವಂಚನೆ?: ಕೆ.ಕುಮಾರ್ ಬೆಸ್ಕಾಂನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ ಹಾಗೂ ಗಂಡುಮಗುವಿನೊಂದಿಗೆಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ವಾಸವಾಗಿದ್ದರು.
"ವಿಕ್ರಮ್ ಗೋಸ್ವಾಮಿ ಹೆಸರಿನ ವ್ಯಕ್ತಿ ಸಿಬಿಐ ಅಧಿಕಾರಿ ಎಂದು ಕರೆಮಾಡಿ, ನಿನ್ನ ಮೇಲೆ ಅರೆಸ್ಟ್ ವಾರಂಟ್ ಬಂದಿದೆ ಎಂದು ಹೆದರಿಸಿದ್ದ. ನಿನ್ನನ್ನು ಪ್ರಕರಣವೊಂದರಲ್ಲಿ ಬಂಧಿಸುತ್ತೇನೆ ಎಂಬ ಬೆದರಿಕೆ ಹಾಕಿದ. ತದನಂತರ, ಸಹಾಯ ಮಾಡುವುದಾಗಿ ಹೇಳಿ ಮೊದಲಿಗೆ 1.95 ಲ ರೂ. ಹಾಕಿಸಿಕೊಂಡ. ಬಳಿಕ ಇದನ್ನೇ ಮುಂದುವರಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಸುಮಾರು 11 ಲ ರೂ. ವರೆಗೂ ಹಾಕಿಸಿಕೊಂಡಿದ್ದಾನೆ.ಇಷ್ಟಕ್ಕೆ ಸುಮ್ಮನಾಗದೆ ಮತ್ತೆ 2.75 ಲ ರೂ. ಹಾಕುವಂತೆ ಪೀಡಿಸುತ್ತಿದ್ದಾನೆ. ಈ ವಿಚಾರವಾಗಿ ಸಾಕಷ್ಟು ಹಿಂಸೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನನ್ನ ಸಾವನ್ನು ನಾನೇ ತಂದುಕೊಳ್ಳುತ್ತಿದ್ದೇನೆ' ಎಂದು ಡೆತ್ನೋಟ್ನಲ್ಲಿ ಉಲ್ಲೆಖಿಸಿದ್ದಾರೆ.
ಮಗನನ್ನು ನೋಡಿಕೊಳ್ಳಿ!!: ಪತ್ನಿ ಹಾಗೂ ಮಗನನ್ನು ಚನ್ನಾಗಿ ನೋಡಿಕೊಳ್ಳುವಂತೆ ಕುಮಾರ್ ಸಂಬಂಧಿಕರನ್ನು ಡೆತ್ನೋಟ್ನಲ್ಲಿ ಕೋರಿದ್ದಾರೆ. ಸಂಬಂಧಿಕರ ಕೆಲ ಹೆಸರುಗಳನ್ನು ಉಲ್ಲೆಖಿಸಿ, ನನ್ನ ಮಗನಿಗೆ ತಂದೆ ಇಲ್ಲ ಎಂಬ ಕೊರತೆ ಬಾರದಂತೆ ನೋಡಿಕೊಳ್ಳಿ, ನಿಮ್ಮ ಕೈ ಮುಗಿದು ಬೇಡುತ್ತೇನೆ ಎಂದು ಅಲವತ್ತುಕೊಂಡಿದ್ದಾರೆ.