ಕೆಆರ್​ಎಸ್​ ಹಿನ್ನೀರಲ್ಲಿ ಮೋಜು-ಮಸ್ತಿಗೆ ಬಂದ ಯುವಕ-ಯುವತಿಯರ ವಿರುದ್ಧ ಎಫ್​ಐಆರ್, 2 ಕಾರು ಸೀಜ್​

krs
Published on

ಮಂಡ್ಯ: ನಿಷೇಧವಿದ್ದರೂ ಕೆಆರ್​ಎಸ್​ ಹಿನ್ನೀರಲ್ಲಿ ಮೋಜು ಮಸ್ತಿಗೆ ಬಂದಿದ್ದ ನಾಲ್ವರು ಯುವಕರು ಮತ್ತು ನಾಲ್ವರು ಯುವತಿಯರ ಮೇಲೆ ಕೆಆರ್​ಎಸ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ಆರೋಪಿಗಳಿಂದ 2 ಕಾರನ್ನು ಸೀಜ್​ ಮಾಡಲಾಗಿದೆ.

ಕರೊನಾ ಲಾಕ್​ಡೌನ್​ ಜಾರಿಯಲ್ಲಿದ್ದರೂ ಲೆಕ್ಕಿಸದೆ ಮೈಸೂರು ಮೂಲದ ಯುವಕರ ತಂಡ ಯುವತಿಯರೊಂದಿಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಹಿನ್ನಿರಿನ ಬಳಿ ಪಾರ್ಟಿ ಮಾಡಲು ಬಂದಿತ್ತು. ಅಲ್ಲಿಗೆ ಬಂದ ಕೆಆರ್​ಎಸ್​ ಭದ್ರತಾ ಪಡೆ ಪೊಲೀಸರು, ಯುವಕರ ಮೋಜು-ಮಸ್ತಿಗೆ ಬ್ರೇಕ್​ ಹಾಕಿದ್ದರು. ಈ ವೇಳೆ ಪೊಲೀಸರಿಗೆ ಅವಾಜ್ ಹಾಕಿ ಬೆದರಿಕೆ ಹಾಕಿದ್ದು, ಈ ಪ್ರಕರಣವನ್ನು ಮುಚ್ಚಿಹಾಕಲು ಹಿರಿಯ ಪೊಲೀಸ್​ ಅಧಿಕಾರಿ ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಇದೀಗ ಈ ಪ್ರಕರಣ ಸಂಬಂಧ ಎಂಟು ಮಂದಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಲಾಕ್​ಡೌನ್ ನಡುವೆ ಜಿಲ್ಲಾ ಗಡಿ ದಾಟಿ ಬಂದಿದ್ದಲ್ಲದೆ, ನಿಷೇಧವಿದ್ದರೂ ಕೆಆರ್​ಎಸ್​ ಹಿನ್ನೀರು ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿ ಅಲ್ಲಿಯೇ ಮದ್ಯಪಾನ ಮಾಡಿದ್ದಾರೆ ಎಂಬ ಆರೋಪ ಈ ಯುವ ತಂಡ ಮೇಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net