ಡಾ.ಶಂಕರೇಗೌಡರಿಗೆ ಓಪನ್ ಹಾರ್ಟ್ ಸರ್ಜರಿ: ಮಂಡ್ಯದ 5 ರೂಪಾಯಿ ವೈದ್ಯರ ಚೇತರಿಕೆಗೆ ಪ್ರಾರ್ಥನೆ

Doctor-Shankare-Gowda
Published on

ಮಂಡ್ಯ: ಡಾ.ಶಂಕರೇಗೌಡರಿಗೆ ಶುಕ್ರವಾರ ಓಪನ್ ಹಾರ್ಟ್ ಸರ್ಜರಿ ನಡೆದಿದೆ. ಬೆಂಗಳೂರಿನ ಪೋರ್ಟೀಸ್ ಆಸ್ಪತ್ರೆಯಲ್ಲಿ 8 ಮಂದಿ ನುರಿತ ವೈದ್ಯರ ತಂಡ ಸರ್ಜರಿ ಮಾಡಿದೆ.

ಮೇ 23ರಂದು ಶಂಕರೇಗೌಡರಿಗೆ ಲಘು ಹೃದಯಾಘಾತವಾಗಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಇದೀಗ ಶಂಕರೇಗೌಡ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು.

ಚಿಕಿತ್ಸೆಗೆ ಸ್ಪಂದಿಸಿದ ಅವರು ಲವಲವಿಕೆಯಿಂದ ಆರಾಮಾಗಿದ್ದು, ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿತ್ತು. ಈ ಹಿನ್ನೆಲೆಯಲ್ಲಿ ಮೇ 30 ರಂದು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದರು. ಈ ವೇಳೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸುವಂತೆ ಹೃದ್ರೋಗ ತಜ್ಞರು ಸೂಚಿಸಿದ್ದರು.

5 ರೂಪಾಯಿ ಡಾಕ್ಟರ್​ ಶಂಕರೇಗೌಡರು ಬೇಗ ಚೇತರಿಕೆ ಆಗಲಿ ಎಂದು ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರು ವೈದ್ಯರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.(ದಿಗ್ವಿಜಯ ನ್ಯೂಸ್, ಮಂಡ್ಯ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net