ಹಳೇ ಕಾರಿನಲ್ಲಿ ಕುಳಿತು ಖುಷಿಪಟ್ಟ ಸಿಎಂ ಬೊಮ್ಮಾಯಿ‌

old car
Published on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ವಿಧಾನಸೌಧ ಆವರಣದಲ್ಲಿ ಹಳೇ ಕಾರಿನಲ್ಲಿ ಕುಳಿತು ಕ್ಷಣ ಕಾಲ ಪ್ರಯಾಣದ ಅನುಭವ ಪಡೆದರು.

ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಬಳಿ ವನ್ಯಜೀವಿ ಸಪ್ತಾಹ ಅಂಗವಾಗಿ ಆಯೋಜಿಸಿರುವ ವನ್ಯಜೀವಿಗಳ ಸಂರಕ್ಷಣೆಗಾಗಿ ನಡಿಗೆ ಹಾಗೂ ಐತಿಹಾಸಿಕ ಕಾರುಗಳ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿದ ಸಿಎಂ, ನಂತರ ಹಳೇ ಕಾರಿನಲ್ಲಿ ಕುಳಿತು ಸ್ವಲ್ಪ ದೂರ ಮುಂದಕ್ಕೆ ಸಾಗಿದರು. ಬಳಿಕ ಪೂರ್ವ ನಿಗದಿ ಕಾರ್ಯಕ್ರಮಕ್ಕೆ ತರೆಳಿದರು.

ಸಚಿವರಾದ ಎಂಟಿಬಿ ನಾಗರಾಜ್, ಗೋವಿಂದ ಕಾರಜೋಳ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಕಾರ್ಯದರ್ಶಿ(ಅರಣ್ಯ) ಡಾ.ಸಂಜಯ್ ಎಸ್.ಬಿಜ್ಜೂರ್, ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ರಾಜ್‌ ಕಿಶೋರ್‌ ಸಿಂಗ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net