

ಶಿರಸಿ: ಅಡಕೆ ಗೊನೆ ಕೆಳಗಿಸುವ ವೇಳೆ ಕೆಳಗಡೆ ಇದ್ದ ವ್ಯಕ್ತಿಯ ತಲೆ ಮೇಲೆ ಗೊನೆ ಬಿದ್ದ ಪರಿಣಾಮ ಮೃತಪಟ್ಟ ಘಟನೆ ತಾಲೂಕಿನ ಕಲಗಾರಿನಲ್ಲಿ ಶುಕ್ರವಾರ ನಡೆದಿದೆ.
ಸೀತಾರಾಮ ಗೌಡ (56) ಮೃತಪಟ್ಟ ವ್ಯಕ್ತಿಯಾಗಿದ್ದಾನೆ.
ಈತ ಗುರುವಾರ ತಲೆ ಮೇಲೆ ಅಡಕೆ ತುಂಬಿದ್ದ ಬುಟ್ಟಿ ಒಯ್ಯುತ್ತಿದ್ದ ವೇಳೆ ಮರದಲ್ಲಿ ಕೊಯ್ದ ಗೊನೆ ಬುಟ್ಟಿಯ ಮೇಲೆ ಬಿದ್ದಿದೆ. ತೀವ್ರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚೇತರಿಕೆಯಾಗದೆ ಶುಕ್ರವಾರ ಸಂಜೆ ನಿಧನ ಹೊಂದಿದ್ದಾರೆ.