

ಬೆಂಗಳೂರು: ಜೋರಾಗಿ ಗಂಟೆ ಶಬ್ದ ಮಾಡಿದ್ದಕ್ಕೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನಕ್ಕೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ದೊಡ್ಡ ಗಣಪತಿ ದೇವಾಲಯದಲ್ಲಿ ಡೆಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನ ಬಳಕೆ ಮಾಡಲಾಗುತ್ತಿತ್ತು. ಈ ಹಿನ್ನೆಲೆ ಜೋರಾಗಿ ಗಂಟೆ ಶಬ್ದ ಮಾಡದಂತೆ ದೊಡ್ಡಗಣಪತಿ ಸಮೂಹ ಸಂಸ್ಥೆ ದೇವಸ್ಥಾನಗಳಿಗೆ ಬಸವನಗುಡಿ ಠಾಣೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ನಿಯಮ ಉಲ್ಲಂಘಿಸಿ ಶಬ್ದ ಮಾಲೀನ್ಯ ಮಾಡಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.