ಒಂದೂವರೆ ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದ ಯುವಕ ದುರಂತ ಸಾವು! ಬಾಳಿ ಬದುಕಬೇಕಿದ್ದವನ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

mandya raghu case
Published on

ಮಂಡ್ಯ: ಒಂದೂವರೆ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕನೊಬ್ಬ ದಾಯಾದಿ ಕಲಹಕ್ಕೆ ಬಲಿಯಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಮೂಡನಹಳ್ಳಿಯಲ್ಲಿ ಸಂಭವಿಸಿದೆ.

ಮೂಡನಹಳ್ಳಿ ರಘು (29) ಮೃತ ದುರ್ದೈವಿ. ಸ್ವಂತ ಕಾರು ಹೊಂದಿದ್ದ ರಘು ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಒಂದೂವರೆ ತಿಂಗಳ ಹಿಂದೆ ಮದುವೆ ಕೂಡ ಆಗಿತ್ತು. ನೂರಾರು ಕನಸು ಕಟ್ಟಿಕೊಂಡು ದಾಪಂತ್ಯ ಜೀವನಕ್ಕೆ ಕಾಲಿಟ್ಟ ಯುವತಿಗೆ, ಗಂಡನ ಸಾವಿನ ಸುದ್ದಿ ಆಘಾತ ತಂದಿದೆ, ಮದುವೆ ಸಂಭ್ರಮದಲ್ಲಿದ್ದ ಎರಡೂ ಕುಟುಂಬಸ್ಥರ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.

ರಘುಗೆ ಏನಾಯ್ತು?: ಕರೊನಾ ಲಾಕ್​ಡೌನ್​ ಹಿನ್ನೆಲೆ ಸ್ವಗ್ರಾಮ ಮೂಡನಹಳ್ಳಿಗೆ ಬಂದಿದ್ದ ರಘು, ಅಲ್ಲೇ ಇದ್ದ. ಇತ್ತೀಚಿಗೆ ಮದುವೆಯನ್ನೂ ಮಾಡಿಕೊಂಡಿದ್ದ. ಸೆ.26ರಂದು ಬೆಂಗಳೂರಿಗೆ ಹೊರಡಲು ನಿರ್ಧರಿಸಿದ್ದ ರಘು, 25ರ ರಾತ್ರಿ ಕಾರನ್ನು ಸ್ವಚ್ಛ ಮಾಡುತ್ತಿದ್ದ. ಈ ವೇಳೆ ಹಿಂದಿನಿಂದ ದುಷ್ಕರ್ಮಿಯೊಬ್ಬ ರಘು ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಪರಾರಿಯಾಗಿದ್ದ.

ಸುಟ್ಟಗಾಯಗಳಿಂದ ನರಳುತ್ತಿದ್ದ ರಘುನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು(ಗುರುವಾರ) ರಘು ಮೃತಪಟ್ಟಿದ್ದಾನೆ.

ರಘು ಸಂಬಂಧಿ ಶಿವು ಎಂಬಾತನೇ ಬೆಂಕಿ ಹಚ್ಚಿದ್ದು ಎಂಬ ಆರೋಪ ಕೇಳಿಬಂದಿದೆ. ದಾಯಾದಿ ಕಲಹಕ್ಕೆ ರಘು ಬಲಿಯಾಗಿದ್ದಾನೆ ಎನ್ನಲಾಗಿದ್ದು, ಘಟನೆ ನಡೆದ ದಿನದಿಂದ ಶಿವು ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net