ನಂಜನಗೂಡು ದೇವಸ್ಥಾನ ಹುಂಡಿಯಲ್ಲಿ 2.15 ಕೋಟಿ ರೂ. ಸಂಗ್ರಹ: ಭಕ್ತರಿಂದ ದಾಖಲೆ ಮೊತ್ತದ ಕಾಣಿಕೆ

1208020
Published on

ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಹುಂಡಿಗೆ ಈ ಬಾರಿ ಭಕ್ತರಿಂದ ದಾಖಲೆಯ ನಗದು ಕಾಣಿಕೆ ಬಂದಿದೆ.

ಒಂದೂವರೆ ತಿಂಗಳ ಅವಧಿಯಲ್ಲಿ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಶುಕ್ರವಾರ ಎಣಿಕೆ ಮಾಡಲಾಯಿತು. ಒಟ್ಟು 21 ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಯಿತು. ನಗದು, ಚಿನ್ನ ಮತ್ತು ಬೆಳ್ಳಿಯ ಜತೆ 29 ವಿದೇಶಿ ಕರೆನ್ಸಿಗಳೂ ಸಿಕ್ಕಿವೆ. ಬ್ಯಾಂಕ್​ ಆಫ್​ ಬರೋಡಾ ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಹುಂಡಿ ಎಣಿಕೆ ನಡೆಯಿತು. 2.15 ಕೋಟಿ ರೂ. ನಗದು, 108 ಗ್ರಾಂ ಚಿನ್ನ ಹಾಗೂ 5.750 ಕೆಜಿ ಬೆಳ್ಳಿ ಲಭ್ಯವಾಗಿದೆ. ಇದು ದೇವಸ್ಥಾನದ ಸಾರ್ವಕಾಲಿಕ ದಾಖಲೆ.

ಅಮಾನ್ಯಗೊಂಡ ನೋಟು ಪತ್ತೆ: ಹುಂಡಿ ಎಣಿಕೆಯಲ್ಲಿ ಅಮಾನ್ಯ ನೋಟುಗಳು ದೊರೆಯುತ್ತಿರುವುದು ಈ ಬಾರಿಯೂ ಮುಂದುವರಿದಿದೆ. 1000 ರೂ. ಮುಖಬೆಲೆಯ 10 ಹಾಗೂ 500 ರೂ. ಮುಖ ಬೆಲೆಯ 64 ನೋಟು ಸೇರಿದಂತೆ ಒಟ್ಟು 42 ಸಾವಿರ ರೂ. ಮೌಲ್ಯದ ಹಳೆಯ ನೋಟುಗಳು ಹುಂಡಿಯಲ್ಲಿ ಸಂಗ್ರಹವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net