ಆ ಚುಚ್ಚುಮಾತನ್ನ ಸಹಿಸಲಾಗ್ತಿಲ್ಲ, ನನ್ನ ಸಾವಿಗೆ ಅಪ್ಪ-ಅಮ್ಮನೇ ಕಾರಣ... ಮಗನ ಸಾವಿನ ಬಳಿಕ ಹೆತ್ತವರು ಎಸ್ಕೇಪ್​

death case
Published on

ಮಂಡ್ಯ: ನನ್ನ ಸಾವಿಗೆ ಅಪ್ಪ-ಅಮ್ಮನೇ ಕಾರಣ. ಅವರ ಚುಚ್ಚು ಮಾತಿನಿಂದ ನೊಂದಿರುವೆ. ಪದೇಪದೆ ಹಂಗಿಸುತ್ತಾರೆ ಎಂದು ಡೆತ್​ನೋಟ್​ ಬರೆದಿಟ್ಟ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ‌ ನಾಗತೀಹಳ್ಳಿಯಲ್ಲಿ ಸಂಭವಿಸಿದೆ.

ರಾಜು ಮತ್ತು ದೇವಮಣಿ ದಂಪತಿಯ ಪುತ್ರ ಗಿರೀಶ್(32) ಮೃತ ದುರ್ದೈವಿ. ಗಿರೀಶ್ ತಂದೆ ಮತ್ತು ತಾಯಿ ಇಬ್ಬರೂ ಸರ್ಕಾರಿ ಶಾಲೆ ಶಿಕ್ಷಕರು. ಸದ್ಯ ರಾಜು ವೃತ್ತಿಯಿಂದ ನಿವೃತ್ತರಾಗಿದ್ದಾರೆ. 11 ವರ್ಷದ ಹಿಂದೆ ಗಿರೀಶ್​ಗೆ ತ್ರಿವೇಣಿ ಎಮಬಾಕೆ ಜತೆ ಮದುವೆ ಆಗಿತ್ತು. ಇಷ್ಟು ವರ್ಷವಾದ್ರೂ ಮಕ್ಕಳಾಗಿರಲಿಲ್ಲ.

ಮಕ್ಕಳಾಗಲಿಲ್ಲ ಎಂದು ಶಿಕ್ಷಕ ದಂಪತಿ ಇಬ್ಬರೂ ಮಗನಿಗೆ ಮಾನಸಿಕ ಕಿರುಕುಳ ಕೊಡುತ್ತಿದ್ದರುರಂತೆ. ಆಸ್ತಿಯನ್ನೂ ಕೊಡದೆ, ಅಪ್ಪ-ಅಮ್ಮ ಇಬ್ಬರೂ ಚೆಂದದ ಮನೆಯಲ್ಲಿ ವಾಸವಿದ್ದು, ಮಗ ಮತ್ತು ಸೊಸೆಗೆ ಕೊಟ್ಟಿಗೆ ಮನೆಯಲ್ಲಿ ವಾಸಿಸಲು ಬಿಟ್ಟಿದ್ದರಂತೆ. ಪದೇಪದೆ ಮಕ್ಕಳಾಗಿಲ್ಲ ಎಂದು ಹೆತ್ತವರೇ ನನ್ನನ್ನು ಹಂಗಿಸುತ್ತಿದ್ದರು. ಇದರಿಂದ ಮನನೊಂದು ಸಾಯುತ್ತಿರುವೆ ಎಂದು ಡೆತ್​ನೋಟ್​ ಬರೆದಿಟ್ಟು ಗಿರೀಶ್​ ಸಾವಿನ ಮನೆಯ ಕದ ತಟ್ಟಿದ್ದಾನೆ. ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪಾಲಕರು ತಲೆ ಮರೆಸಿಕೊಂಡಿದ್ದಾರೆ. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net