ರಾತ್ರಿಯಾದ್ರೂ ಪಾರ್ಕ್​ನಲ್ಲೇ ಇದ್ದ ಜೋಡಿ, ಬುದ್ಧಿ ಹೇಳಿದ ಪೊಲೀಸ್​ಗೆ ಹೀಗಾ ಮಾಡ್ಹೋದು?

myose park
Published on

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಅಷ್ಟಾದರೂ ಕೆಲ ಜೋಡಿಗಳು ರಾತ್ರಿ ವೇಳೆ ಪಾರ್ಕ್​​ ಮತ್ತು ಪೊದೆಯಲ್ಲಿ ಕೂರುವುದು ನಿಂತಿಲ್ಲ ಎಂಬುದಕ್ಕೆ ನಿನ್ನೆ ರಾತ್ರಿ ನಡೆದ ಘಟನೆಯೊಂದು ಸಾಕ್ಷೀಕರಿಸಿದೆ.

ಮೈಸೂರಿನ ಸಿದ್ದಾರ್ಥ ನಗರದ ಪಾರ್ಕ್​ನಲ್ಲಿ ಬಾನುವಾರ ರಾತ್ರಿ ಪ್ರೇಮಿಗಳಿಬ್ಬರು ಕಳಿತಿದ್ದರು. ಗಸ್ತಿನಲ್ಲಿದ್ದ ಪೊಲೀಸ್​ ಪೇದೆ ಮುರಲಿ ಇವರನ್ನ ಕಂಡು, 'ಕತ್ತಲಾಗಿದೆ ಮನೆಗೆ ಹೋಗಿ, ಪೋಲಿಗಳು ಚುಡಾಯಿಸಿದ್ರೆ ಏನ್​ ಮಾಡ್ತೀರಿ? ಬುದ್ಧಿ ಇಲ್ವಾ? ಇಷ್ಟೊತ್ತಲ್ಲಿ ಇಲ್ಲೆಲ್ಲ ಯಾಕೆ ಕೂರ್ತೀರಿ?' ಎಂದು ಬುದ್ಧಿ ಹೇಳಿದ್ದಾರೆ. ಬುದ್ಧಿಮಾತು ಹೇಳಿದ ಪೊಲೀಸ್ ಪೇದೆ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಗಾಯಗೊಂಡ ಪೊಲೀಸ್ ಪೇದೆ ಮುರುಳಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net