ಮೈಸೂರು-ಚೆನ್ನೈಗೆ ಬೆಳಗಿನ ವಿಮಾನಯಾನ ಸೇವೆ ಇಂದಿನಿಂದ ಆರಂಭ

Mysore Airport
Published on

ಮೈಸೂರು: ಮೈಸೂರು ವಿಮಾನ ನಿಲ್ದಾಣದಿಂದ ಚೆನ್ನೈಗೆ ಬೆಳಗಿನ ವಿಮಾನಯಾನ ಸೇವೆ ಇಂದಿನಿಂದ(ಆ.12) ಪ್ರಾರಂಭವಾಗಲಿದ್ದು, ಅಲಯನ್ಸ್​ ಏರ್​ ಈ ಸೇವೆ ನೀಡುತ್ತಿದೆ.

ಈಗಾಗಲೇ ಇಂಡಿಗೋ ಏರ್​ಲೈನ್ಸ್​ ಸಂಜೆ ವೇಳೆಯಲ್ಲಿ ಮೈಸೂರು-ಚೆನ್ನೈ ನಡುವೆ ವಿಮಾನ ಸೇವೆ ನೀಡುತ್ತಿದೆ. ಆದರೆ, ಈ ಮಾರ್ಗದಲ್ಲಿ ಬೆಳಗ್ಗೆ ವಿಮಾನಸೇವೆ ಒದಗಿಸಬೇಕೆಂಬುದು ಹೆಚ್ಚಿನ ಪ್ರಯಾಣಿಕರ ಬೇಡಿಕೆಯಾಗಿತ್ತು. ಆದ್ದರಿಂದ ಅಲಯನ್ಸ್​ ಏರ್​ ಮೈಸೂರು- ಚೆನ್ನೈ ನಡುವೆ ವಿಮಾನ ಸೇವೆ ಆರಂಭಿಸಿದೆ.

ವಾರದಲ್ಲಿ ಮೂರು ದಿನ (ಬುಧವಾರ, ಶುಕ್ರವಾರ, ಭಾನುವಾರ) ವಿಮಾನ ಹಾರಾಟ ನಡೆಸಲಿದೆ. ವಿಮಾನವು ಚೆನ್ನೈನಿಂದ ಬೆಳಗ್ಗೆ 9.25ಕ್ಕೆ ಹೊರಡಲಿದ್ದು, 11 ಗಂಟೆಗೆ ಮೈಸೂರಿಗೆ ಬರಲಿದೆ. ಬಳಿಕ ಮೈಸೂರಿನಿಂದ ಬೆಳಗ್ಗೆ 11.30ಕ್ಕೆ ಹೊರಟು, ಮಧ್ಯಾಹ್ನ 1.30ಕ್ಕೆ ಚೆನ್ನೈ ತಲುಪಲಿದೆ. 70 ಆಸನಗಳನ್ನು ಒಳಗೊಂಡಿರುವ ಐಷಾರಾಮಿ ವಿಮಾನ ಇದಾಗಿದ್ದು, ಆರಾಮದಾಯಕವಾಗಿ ಪ್ರಯಾಣ ಮಾಡಬಹುದು. ಟಿಕೆಟ್​ ದರ ತಲಾ 4678 ರೂ. ನಿಗದಿಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net