ಕಲಾರಸಿಕರಿಗೆ ಸಂಗೀತದ ರಸದೌತಣ

ವಿವಿಧ ಭಜನಾ ಮಂಡಳಿ ಸದಸ್ಯರಿಂದ ಕೋಲಾಟ.
20cmy10 Bajna mandali Kolata
ವಿವಿಧ ಭಜನಾ ಮಂಡಳಿ ಸದಸ್ಯರಿಂದ ಕೋಲಾಟ.
Published on

ನಾದೋಪಾಸನೆಯಲ್ಲಿ ಮಿಂದೆದ್ದ ಭಕ್ತರು- ಕೈವಾರದಲ್ಲಿ ಗುರುಪೂಜೆ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ತಾಲೂಕಿನ ಶ್ರೀ ಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ಮಠದಲ್ಲಿ ಆಯೋಜಿಸಿರುವ ಮೂರು ದಿನಗಳ ಗುರುಪೂಜೆ ಸಂಗೀತೋತ್ಸದ ಎರಡನೇ ದಿನವಾದ ಶನಿವಾರವೂ ಸಂಗೀತ ಸುಧೆಯನ್ನು ಸವಿಯಲು ದೂರದ ಊರುಗಳಿಂದ ಭಕ್ತರು ತಂಡೋಪತಂಡವಾಗಿ ಆಗಮಿಸಿದ್ದರು.
ಸಂಗೀತೋತ್ಸವದಲ್ಲಿ ಕಲಾಭಿಮಾನಿಗಳು ಸಂಗೀತದ ರಸದೌತಣವನ್ನು ಸವಿಯುತ್ತಿದ್ದಾರೆ. ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ಬೆಳಗ್ಗೆ ನಾದಸ್ವರ ವಾದನ, ತವಿಲ್ ವಾದ್ಯಗಳಿಂದ ಎರಡನೇ ದಿನದ ಕಾರ್ಯಕ್ರಮಗಳು ಪ್ರಾರಂಭವಾದವು. ಮಂಜುನಾಥ್ ಮಾಲೂರು, ಡಾ. ಎಂ.ವಿ. ಶ್ರೀನಿವಾಸಮೂರ್ತಿ, ತಿರುಪತಿ ಬಿ.ರಘುನಾಥ್, ಕೆ.ಎಸ್.ಶ್ವೇತಾ, ಅಶ್ವಿನಿ ಮೋಹನ್, ಮರಕತವಲ್ಲಿ, ವಿಷ್ಣು ವೆಂಕಟೇಶ್, ಜಿ.ಎಸ್.ಬ್ರಹ್ಮೇಂದ್ರ, ಎ.ವಿ. ವಿಶ್ವನಾಥ್, ಕೃಷ್ಣ ಹೊಸೂರು, ಲಾವಣ್ಯ ರೂಪಕಲಾ, ಅಪರ್ಣ ಕೃಷ್ಣಕುಮಾರ್, ಮುರಳಿ, ವಾನರಾಶಿ ಬಾಲಕೃಷ್ಣ ಭಾಗವತರ್ ಮತ್ತಿತರ ಕಲಾವಿದರು ಸಂಗೀತ ಪ್ರಸ್ತುತಪಡಿಸಿದರು.

ಸಂಜೆ ಚೆನ್ನೈನ ಪದ್ಮಶ್ರೀ ಎ.ಕನ್ಯಾಕುಮಾರಿ ಪಿಟೀಲು, ಸಿ.ಕೆ.ಪತಂಜಲಿ ತಂಡದಿಂದ ಕೊಳಲು, ಕೇರಳದ ಸೂರ್ಯಗಾಯತ್ರಿ ಗಾಯನ, ಸಿಕ್ಕಿಲ್ ಗುರುಚರಣ್ ತಂಡದವರಿಂದ ಗಾಯನ, ಬೆಂಗಳೂರಿನ ಶ್ರೀ ರುದ್ರಾಕ್ಷ ನಾಟ್ಯಾಲಯ ತಂಡದಿಂದ ಭರತನಾಟ್ಯ ಕಾರ್ಯಕ್ರಮ, ಚೆನ್ನೈನ ಕೆ.ವಿ. ಪ್ರಸಾದ್, ಬಿ.ಹರಿಕುಮಾರ್, ಬೆಂಗಳೂರು ಪ್ರವೀಣ್ ಅವರ ಮೃದಂಗ ವಾದನ. ಡಾ.ಎ.ವಿಜಯ್ ಕಾರ್ತೀಕೇಯನ್, ವಿ.ಪ್ರಕಾಶ್ ಇಳಯರಾಜ, ಪಿ.ಎಂ.ರಂಜಿತ್ ವಿನಾಯಕ್, ಬಿ.ಮುತ್ತುಕುಮಾರ್, ಮಲೈ ಎಂ.ಕಾರ್ತೀಕೇಯನ್, ಜಿ.ವಿನೋದ್ ಕುಮಾರ್, ಟಿ.ಜಿ.ಗೋವಿಂದರಾಜು, ಟಿ.ಜಿ.ಮುತ್ತುಕುಮಾರ್ ರವರಿಂದ ವಿಶೇಷ ನಾದಸ್ವರ, ತವಿಲ್ ವಾದನ ಸಭಿಕರ ಮನಸೂರೆಗೊಂಡಿತು.
ಜಾನಪದ ಕಲಾವಿದರು, ಕೋಲಾಟ, ಭಜನೆ, ಹರಿಕಥೆ, ಬುರ‌್ರಕಥೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆಯಿತು. ಸಂಗೀತೋತ್ಸವದಲ್ಲಿ ಭಾಗವಹಿಸಿದ್ದವರಿಗೆ ಅನ್ನ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಇಂದಿನ ಕಾರ್ಯಕ್ರಮ
ಗುರುಪೂಜೆ: ಗುರುಪೂರ್ಣಿಮೆ ದಿನವಾದ ಭಾನುವಾರ ಬೆಳಗ್ಗೆ ಬೇತಮಂಗಲ ಗಂಗಾಧರ ಸ್ಮಾರಕ ಸಂಗೀತ ಶಾಲೆಯ ವಿ.ರಮೇಶ್ ತಂಡದಿಂದ ನಾದಸ್ವರ ವಾದನ, ನಂತರ ತಾತಯ್ಯನವರು ರಚಿಸಿರುವ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ ನಡೆಯಲಿದೆ. ಸದ್ಗುರು ತಾತಯ್ಯನವರ ಗುರುಪೂಜೆ. ವಿಶೇಷ ಅಭಿಷೇಕ, ರಾಜೋಪಚಾರ, ಅಷ್ಟಾವಧಾನ ಸೇವೆಗಳು ನಡೆಯಲಿವೆ. ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್ ಅವರಿಂದ ಗುರುಚಿಂತನಾ ಸಂದೇಶ.
‘ಬ್ರಹ್ಮಾಂಡಪುರಿ ಶತಕ ಯೋಗದೃಷ್ಟಿ’, ‘ಶ್ರೀರಾಮಭವತಾರಕ ಮಂತ್ರ ಯೋಗಸಾರ’ ಕೃತಿಗಳ ಬಿಡುಗಡೆ.
ಮೃದಂಗ ವಿದ್ವಾನ್ ವಿ.ಪ್ರವೀಣ್ ಹಾಗೂ ಭಜನಾ ಭಕ್ತ ಕೆ.ರಾಜಪ್ಪ ಅವರಿಗೆ ಸನ್ಮಾನ.

ಸಂಗೀತ: ಆನೂರು ಅನಂತಕೃಷ್ಣಶರ್ಮ ತಂಡದವರಿಂದ ಲಯಲಹರಿ ತಾಳವಾದ್ಯ, ಮಂಜುಳಾ ಜಗದೀಶ್, ಆಶಾ ಮಂಜುನಾಥ್, ಚಿಂತಾಮಣಿ ಸಂಗೀತ ಶಾಲೆ ಪದ್ಮಾವತಿ ಮತ್ತು ತಂಡ, ಚಿಂತಲಪಲ್ಲಿ ಸೋಮಶೇಖರ್, ಶ್ರೀ ಯೋಗಿನಾರೇಯಣ ಮಹಿಳಾ ತಂಡ, ಚಿಂತಲಪಲ್ಲಿ ಕಿಶೋರ್ ಕುಮಾರ್, ಇ.ರಾಮಕೃಷ್ಣಾಚಾರ್, ಚಂದ್ರಪ್ಪ, ಬಿ.ಅಮರಶೀ ತಂಡ, ತಿರುಪತಿ ಭಾಸ್ಕರ್, ಆನೂರು ಫಣೀಂದ್ರಶರ್ಮ, ಜಯಲಕ್ಷ್ಮೀ ಎಸ್. ಭಟ್ ತಂಡದವರಿಂದ ಸಂಗೀತ ಕಾರ್ಯಕ್ರಮ.
ಸಂಜೆ: ದೆಹಲಿಯ ಸರಸ್ವತಿ ರಾಜಗೋಪಾಲನ್ ಅವರಿಂದ ವೀಣಾವಾದನ, ಭೈರತಿ ಆಂಜಿನಪ್ಪ ತಂಡ ಗಾಯನ, ತೇಜಸ್ವಿನಿ ಮನೋಜ್ ಕುಮಾರ್ ಗಾಯನ, ಕೆ.ಸುಧಾಮಣಿ ವೆಂಕಟರಾಘವನ್ ಗಾಯನ, ಸುಬ್ಬಲಕ್ಷ್ಮೀ ಸ್ಯಾಕ್ಸೋಪೋನ್, ಮಹಾಲಿಂಗಯ್ಯ ಮಠದ ತಂಡದಿಂದ ಹಿಂದುಸ್ತಾನಿ ಗಾಯನ, ನೂಪುರ ಫೈನ್ ಆರ್ಟ್ಸ್‌ನ ರೂಪಾರಾಜೇಶ್ ತಂಡದವರಿಂದ ಕೂಚಿಪುಡಿ ನೃತ್ಯ ಕಾರ್ಯಕ್ರಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net