

ಮಂಗಳೂರು: ಅಪ್ರಾಪ್ತ ಬಾಲಕಿಗೆ ಮೊಬೈಲ್ ನಂಬರ್ ಕೊಟ್ಟ ಬಸ್ ನಿರ್ವಾಹಕನನ್ನು ಬಸ್ನಿಂದ ಕೆಳಗಿಳಿಸಿ ಬಾಲಕಿಯ ತಾಯಿ ಹಿಗ್ಗಾಮುಗ್ಗಾ ಬಾರಿಸಿದ್ದು, ವಿಡಿಯೋ ವೈರಲ್ ಆಗಿದೆ.
8ನೇ ತರಗತಿ ಓದುತ್ತಿರುವ ಬಾಲಕಿ ಆ ಬಸ್ನಲ್ಲಿ ಕೇವಲ ಒಂದೇ ಬಾರಿ ಪ್ರಯಾಣಿಸಿದ್ದು, ಈ ಸಂದರ್ಭದಲ್ಲಿ ಬಾಲಕಿಗೆ ಕಂಡಕ್ಟರ್ ತನ್ನ ಮೊಬೈಲ್ ನಂಬರ್ ಕೊಟ್ಟಿದ್ದಾನೆ. ಅಲ್ಲದೆ ಕರೆ ಮಾಡಿ ಮನೆಯಲ್ಲಿ ಯಾರಿದ್ದಾರೆ ಎಂದೆಲ್ಲ ಕೇಳಿದ್ದಾನೆ ಎನ್ನುತ್ತಿರುವುದು ವಿಡಿಯೋದಲ್ಲಿದೆ. ಬಸ್ ನಿರ್ವಾಹಕ ಈ ಮೊದಲೂ ಇದೇ ರೀತಿಯ ವರ್ತನೆ ತೋರಿದ್ದಾನೆ ಎಂದು ದೂರುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.