ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಕೋತಿ! ಮೃತದೇಹಕ್ಕೆ ನೀರು ಕುಡಿಸಲು ಯತ್ನಿಸಿದ ವಾನರ...

New Project(7)
Published on

ಬೆಳಗಾವಿ: ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಮಂಗವೊಂದು ಭಾಗಿಯಾದ ಅಪರೂಪದ ಘಟನೆ ಶನಿವಾರ ಶಹಾಪುರದಲ್ಲಿ ನಡೆದಿದೆ.

ಶಹಾಪುರ ಜೋಶಿ ಗಲ್ಲಿಯ ನಿವಾಸಿ ಮಾರುತಿ ಕಡಗಾಂವಕರ(65) ಎಂಬುವರು ಮೃತಪಟ್ಟಿದ್ದರು. ಪಾರ್ಥಿವ ಶರೀರವನ್ನು ಕುಟುಂಬಸ್ಥರು ಮತ್ತು ಸಂಬಂಧಿಕರು ಚಿತಾಗಾರಕ್ಕೆ ತಂದರು. ಆ ವೇಳೆ ಮರದ ಮೇಲೆ ಕುಳಿತ್ತಿದ್ದ ಮಂಗವೊಂದು ಏಕಾಏಕಿ ಮರದಿಂದ ಕೆಳಗೆ ಇಳಿದು, ಅಂತ್ಯಕ್ರಿಯೆ ವೇಳೆ ಚಿತಾಗಾರದ ಬಲಭಾಗದಲ್ಲಿ ಸುಮಾರು ಹೊತ್ತು ಕುಳಿತ್ತಿತ್ತು.

ಅಂತ್ಯಕ್ರಿಯೆಗೆ ಬಂದಿದ್ದ ಜನರು ಆರಂಭದಲ್ಲಿ ಮಂಗವನ್ನು ನಿರ್ಲಕ್ಷಿಸಿದರು. ಆದರೆ, ಸ್ಮಶಾನ ಪ್ರವೇಶಿಸಿದ ಮಂಗ ಚಿತೆಗೆ ತಂದಿದ್ದ ಮರದ ದಿಮ್ಮಿಗಳ ಮೇಲೆ ಕುಳಿತಿತ್ತು. ಅಷ್ಟೇ ಅಲ್ಲ ಮಾರುತಿ ಕಡಗಾಂವಕರ ಅವರ ಮೃತದೇಹವನ್ನು ಮುಟ್ಟುವುದಕ್ಕೂ ಮುಂದಾಗಿತ್ತು. ಮೃತ ಮಾರುತಿಗೆ ನೀರು ಕೊಡಲು ಕೋತಿಯು ಬಯಸಿತ್ತು. ಸ್ಮಶಾನದಲ್ಲಿ ಗಲಾಟೆಯಿಂದಾಗಿ ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ಚಿತೆಯನ್ನು ಸಿದ್ಧಪಡಿಸಿ ಅದರ ಮೇಲೆ ಮೃತದೇಹ ಇಡುವ ಪ್ರಕ್ರಿಯೆಯತ್ತ ಮಂಗ ಗಮನ ಹರಿಸುತ್ತಿರುವುದನ್ನು ಕಂಡು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಜನ ಅಚ್ಚರಿ ಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net