More

    ಮನೆ-ಮನೆಗೂ ತಲಾ 5 ಸಾವಿರ ರೂಪಾಯಿ ದಾನ ಮಾಡ್ತೀನಿ: ಕೆಜಿಎಫ್​ ಬಾಬು ಘೋಷಣೆ

    ಬೆಂಗಳೂರು: ನನ್ನ ಹಣ ನಾನು ದಾನ ಮಾಡ್ತೀನಿ. ಈ ಬಗ್ಗೆ ಯಾವ ಅಧಿಕಾರಿಯೂ ನನ್ನನ್ನು ಪ್ರಶ್ನೆ ಮಾಡೋಹಾಗಿಲ್ಲ. ಮುಂದಿನ ಐದು ವರ್ಷ ಎಲ್ಲ ಮನೆಗೂ ತಲಾ 5 ಸಾವಿರ ರೂಪಾಯಿ ಕೊಡ್ತೀನಿ ಎಂದು ಕೆಜಿ‌ಎಫ್ ಬಾಬು ಘೋಷಣೆ ಮಾಡಿದರು.

    ವಿಚಾರಣಗೆ ಹಾಜರಾಗುವಂತೆ ಇಡಿ ನೋಟಿಸ್​ ಜಾರಿ ಮಾಡಿದ ಬೆನ್ನಲ್ಲೇ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕೆಜಿಎಫ್​ ಬಾಬು, ನಾನು ರಾಜಕೀಯಕ್ಕೆ ಬಂದಿದ್ದಕ್ಕೆ ಈ ರೀತಿ ತೊಂದರೆ ಕೊಡ್ತಿದಾರೆ. ನಾನು ಹೆದರೋದಿಲ್ಲ, ಚಾಲೆಂಜ್ ತರ ತಗೋತೀನಿ. ಚಿಕ್ಕಪೇಟೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀನಿ.ಈ ಭಾಗದಲ್ಲಿ 50 ಸಾವಿರ ಮನೆ ಇದೆ. ಪ್ರತಿ ಮನೆಗೂ ವರ್ಷಕ್ಕೆ ತಲಾ 5 ಸಾವಿರ ಹಣ ಕೊಡ್ತೀನಿ. ಎಲ್ಲರಿಗೂ ಸಹಾಯ ಮಾಡ್ತೀನಿ. ಇಲ್ಲಿನ ಸ್ಲಂನಲ್ಲಿ ಇರುವವರಿಗೆ ಮನೆ ಮಾಡಿ ಕೊಡ್ತಿದ್ದೀನಿ. ಈ ಬಗ್ಗೆ ಯಾರೂ ಪ್ರಶ್ನೆ ಮಾಡೋಹಾಗಿಲ್ಲ. ನನ್ನ ಹಣ, ನನ್ನ ಜನರಿಗೆ ದಾನ ಮಾಡ್ತೀನಿ ಎಂದರು.

    ನನ್ನ ಮನೆ ಮೇಲೆ ಇಡಿ ರೇಡ್ ಆದಾಗ ನಾಲ್ಕು ಕೋಟಿ ಮೌಲ್ಯದ ಗೋಲ್ಡ್ ಸಿಕ್ತು. ಎಂಟು ಲಕ್ಷಕ್ಕೂ ಹೆಚ್ಚು ಹಣ ಸಿಕ್ತು. ಇದೆಲ್ಲದ್ದಕ್ಕೂ ನನ್ನ ಬಳಿ ಬಿಲ್ ಇದೆ. ದಾಖಲೆಗಳನ್ನ ಕೊಟ್ಟಿದ್ದೀನಿ. ಆದರೂ ನನ್ನ ಗೋಲ್ಡ್ ಸೀಜ್ ಮಾಡಿದ್ದಾರೆ. ದೆಹಲಿಗೆ ಬಂದ್ರೆ ಗೋಲ್ಡ್ ವಾಪಸ್ ಕೊಡ್ತೀವಿ ಅಂತಾ ನೋಟಿಸ್​ ಕೊಟ್ಟಿದ್ರು. ಈಗ ಮತ್ತೆ ನನ್ನ ಪತ್ನಿ ಹೆಸರಿಗೆ ನೋಟಿಸ್ ಕೊಟ್ಟಿದಾರೆ. ಮುಂದಿನ ದಿನಗಳಲ್ಲಿ ನನ್ನ ಮಕ್ಕಳಿಗೂ ನೊಟೀಸ್ ಕೊಡ್ತಾರೆ ಎಂದು ಕೆಜಿಎಫ್ ಬಾಬು ಹೇಳಿದರು.

    ನಾನೊಬ್ಬ ಸ್ಟ್ರೈಟ್​ ಫಾರ್ವರ್ಡ್ ಬಿಜಿನೆಸ್​ಮೆನ್​. ಕಡಿಮೆ ಓದಿದ್ರೂ ನೋಡ್ಕೊಂಡು ಪ್ರಾಪರ್ಟಿ ಖರೀದಿ ಮಾಡ್ತೀನಿ. ಯಾವುದೇ ಮನಿ ಲಾಂಡ್ರಿಂಗ್ ಮಾಡಿಲ್ಲ. ನಾನು 1,740 ಕೋಟಿ ರೂ. ಡಿಕ್ಲೇರ್ ಮಾಡಿದ್ದೀನಿ. ಎಂಎಲ್​ಸಿ ಎಲೆಕ್ಷನ್​ಗೆ ಟಿಕೆಟ್ ಕೊಟ್ಟಾಗ ಡಿಕ್ಲೇರ್ ಮಾಡಿದ್ದೀನಿ. ಕಾಂಗ್ರೆಸ್ ಸೇರಿದಾಗ ಇದೆಲ್ಲಾ ಆಗ್ತಿದೆ. ಇನ್​ಕಮ್ ಟ್ಯಾಕ್ಸ್ ಎಲ್ಲವನ್ನೂ ನೀಟಾಗಿ ಕಟ್ಟಿದೀನಿ. ಆದ್ರೂ ಮನಿಲಾಂಡ್ರಿಂಗ್ ಅಂತಾರೆ. ಇಲ್ಲಿ ಎಲ್ಲಿ ಬರುತ್ತೆ? ಜಮೀರ್ ಅಹ್ಮದ್ ಮನೆ ತೆಗೆದುಕೊಂಡಿದ್ರು, ಅವರಿಗೆ ಸಾಲ ಕೊಟ್ಟಿದ್ವಿ, ಅವ್ರು ಸಾಲ ವಾಪಸ್ ಕೊಟ್ಟಿಲ್ಲ. ಡಿಡಿ ಮುಖಾಂತರ ದುಡ್ಡು ಕೊಟ್ಟಿದ್ದೀನಿ. ಅದೇ ತೊಂದರೆ ಆಯ್ತು. ಅವರು ಇನ್ನೂ ಕೊಟ್ಟಿಲ್ಲ, ಅವರಿಗೆ ಏನು ಕಷ್ಟ ಇದ್ಯೋ ಗೊತ್ತಿಲ್ಲ. 2013ರಿಂದ ಇವತ್ತಿನವರೆಗೂ ಅವರಿಂದ ವಾಪಸ್ ದುಡ್ಡು ಬಂದಿಲ್ಲ. ಅವರಿಗೆ ಲೀಗಲ್ ನೋಟಿಸ್​ ಕೊಟ್ಟಿದ್ದೀನಿ. ಅವರ ಮನೆ ಮೇಲೆ ಇಡಿ ದಾಳಿ ನಡೆಸಿದ್ದಾರೆ. ನನ್ನ ಬಳಿ ಸಾಲ ಪಡೆದಿದ್ದಕ್ಕೆ ಇ.ಡಿ. ಅವರು ಕನ್ಫಾರ್ಮೇಶನ್ ಕೇಳ್ತಿದ್ದಾರೆ. ಅದರಿಂದಲೇ ನನಗೆ ನೋಟಿಸ್​ ಬಂತು. ನಾನು ಇ.ಡಿ. ಕಚೇರಿಗೆ ಹಾಜರಾಗಿ ಬಂದಿದ್ದೀನಿ. ಯಾಕೆ ದುಡ್ಡು ಕೊಟ್ರಿ, ಯಾಕೆ ಇನ್ನೂ ವಾಪಸ್​ ಪಡೆದಿಲ್ಲ? ಅಂದು. ಅದಕ್ಕೆ ನಾನು ಹೇಳಿದೆ ಅವರು ನಮ್ಮ ಸಮುದಾಯದ ಒಳ್ಳೆ ನಾಯಕ. ನನಗೆ ಜಗಳ ಮಾಡ್ಕೊಂಡು ವಾಪಸ್​ ಪಡೆಯಲು ಇಷ್ಟವಿಲ್ಲ ಅಂತ. ಹತ್ತು ಗಂಟೆ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ವಿವರಿಸಿದರು.

    ಕಾಂಗ್ರೆಸ್​ನಿಂದ ಎಂಎಲ್​ಸಿ ಟಿಕೆಟ್ ಸಿಕ್ಕ ಮೇಲೆ ನಾನು ಕೇರಳದಲ್ಲಿ ಬಿಜಿನೆಸ್​ ನಿಲ್ಲಿಸಿದ್ದೀನಿ. ನಾನು ಕಾಂಗ್ರೆಸ್ ಸೇರಿದ್ದಕ್ಕೇ ಇಡಿ ದಾಳಿಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.

    ರಾಜ್ಯಮಟ್ಟದ ಕಬ್ಬಡಿ ಪಂದ್ಯ ಆಟವಾಡುತ್ತಲೇ ಹಾರಿಹೋಯ್ತು ಆಟಗಾರನ ಪ್ರಾಣಪಕ್ಷಿ! ಮನಕಲಕುತ್ತೆ ಸಾವಿನ ಆ ದೃಶ್ಯ

    ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts