ಬಸವರಾಜ ಹೊರಟ್ಟಿ ಕಾರು ಅಪಘಾತ: ಬೈಕ್​ ಸವಾರನಿಗೆ ಗಾಯ

basavaraja horatti accident
Published on

ಹುಬ್ಬಳ್ಳಿ: ಎಂಎಲ್​ಸಿ ಬಸವರಾಜ ಹೊರಟ್ಟಿ ಅವರ ಕಾರು ಅಪಘಾತಕ್ಕೀಡಾಗಿದ್ದು, ಬೈಕ್​ ಸವಾರ ಗಾಯಗೊಂಡ ಘಟನೆ ಹುಬ್ಬಳ್ಳಿಯ ಬಿವಿಬಿ ಕಾಲೇಜ್​ ಕ್ಯಾಂಪಸ್‌ನಲ್ಲಿ ಭಾನುವಾರ ಸಂಭವಿಸಿದೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಬಸವರಾಜ ಹೊರಟ್ಟಿ ಅವರು ವಾಪಸ್​ ಕಾರಿನಲ್ಲಿ ತೆರಳುವಾಗ ಕಾರು ಮತ್ತು ಬೈಕ್​ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಬೈಕ್​ ಸವಾರ, ಸವದತ್ತಿ ‌ಮೂಲದ ಜೆಸಿಬಿ ಆಪರೇಟರ್ ಕೆಂಚಪ್ಪ ಗಾಯಗೊಂಡಿದ್ದಾರೆ. ಕಿಮ್ಸ್​ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತ ಸಂಭವಿಸಿ ಅರ್ಧ ಗಂಟೆಯಾದರೂ ಘಟನಾ ಸ್ಥಳಕ್ಕೆ ಆಂಬುಲೆನ್ಸ್​ ಬಂದಿರಲಿಲ್ಲ. ಘಟನೆ ನಡೆದ ಬಳಿಕ 10 ನಿಮಿಷ ಸ್ಥಳದಲ್ಲಿದ್ದ ಹೊರಟ್ಟಿ, ಆ ನಂತರ ಬೇರೆ ವಾಹನ ತರಿಸಿ ತೆರಳಿದರು. ಉತ್ತರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net