ಚಿಕನ್ ಸುಕ್ಕಾ ತಿನ್ನುವಾಗ ಸಿಕ್ತು ಮಿಕ್ಸರ್ ಗ್ರೈಂಡರ್​ನ ಬ್ಲೇಡ್​! ಜೊಮಾಟೊ ಮೂಲಕ ಆರ್ಡರ್​ ಮಾಡಿದ್ದವನಿಗೆ ಶಾಕ್​

New Project(25)
Published on

ಹುಬ್ಬಳ್ಳಿ: ಜೊಮಾಟೊ ಮೂಲಕ ಆನ್‌ಲೈನ್​ನಲ್ಲಿ ಚಿಕನ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಆಹಾರದಲ್ಲಿ ಮಿಕ್ಸರ್ ಗ್ರೈಂಡರ್​ನ ಬ್ಲೇಡ್​ನ ತುಂಡು ಸಿಕ್ಕಿದೆ.

ನಗರದ ಮಲ್ಲಿಕಾರ್ಜುನ ಎಂಬುವರು ಜೊಮಾಟೊ ಆ್ಯಪ್ ಮೂಲಕ ವಿದ್ಯಾನಗರದ ಹೊಟೇಲ್​ವೊಂದರಲ್ಲಿ ಚಿಕನ್ ಸುಕ್ಕಾ ಆರ್ಡರ್ ಮಾಡಿದ್ದರು. ಡೆಲಿವರಿ ಬಾಯ್​ ತಂದುಕೊಟ್ಟ ಚಿಕನ್​ ಸುಕ್ಕಾವನ್ನು ತಿನ್ನುವಾಗ ಮಿಕ್ಸರ್ ಗ್ರೈಂಡರ್ನ ಬ್ಲೇಡ್ ಸಿಕ್ಕಿದೆ.

ಕೂಡಲೇ ಎಚ್ಚೆತ್ತ ಮಲ್ಲಿಕಾರ್ಜುನ, ಈ ಬಗ್ಗೆ ಜೂಮಾಟೋ ಆ್ಯಪ್ ಮತ್ತು ಹೋಟೆಲ್​ನವರ ಬಳಿ ವಿಚಾರಿಸಿದ್ದಾರೆ. ಆದರೆ, ಅವರು ಹಾರಿಕೆ ಉತ್ತರ ಕೊಟ್ಟಿದ್ದಾರೆಂದು ಆರೋಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net