ಮಾಗಡಿ ಕೆರೆಯಲ್ಲಿ ಸಿಕ್ಕ ಮೂಟೆಯಲ್ಲಿತ್ತು ಮಿಸ್ಸಿಂಗ್ ಆದವನ ಶವ! ಖಾಕಿ ತಲೆ ಕೆಡಿಸಿದ್ದ ಕೇಸ್​ ಕ್ಲಿಯರ್​ ಆಗಿದ್ದೇ ರೋಚಕ

murder case
Published on

ಬೆಂಗಳೂರು: ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಕೆರೆಯಲ್ಲಿ ವ್ಯಕ್ತಿಯೊಬ್ಬರ ಶವ ಮೂಟೆ ಕಟ್ಟಿ ಬಿಸಾಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಮೂಟೆಯಲ್ಲಿ ಸಿಕ್ಕ ಸಣ್ಣ ಸುಳಿವಿನ ಜಾಡು ಹಿಡಿದು ಹೊರಟ ಪೊಲೀಸರು ಕೊನೆಗೂ ಕೊಲೆಗಾರರನ್ನ ಜೈಲಿಗಟ್ಟಿದ್ದಾರೆ. ಅತ್ತ ಮಗ ನಾಪತ್ತೆಯಾಗಿದ್ದಾನೆ ಹುಡುಕಿಕೊಡಿ ಎಂದು ಕಂಪ್ಲೇಟ್ ಕೊಟ್ಟಿದ್ದ ಪೋಷಕರಿಗೆ ಸಿಕ್ಕಿದ್ದು ಮಾತ್ರ ಕೊಳೆತ ಸ್ಥಿತಿಯಲ್ಲಿ ಮಗನ ಶವ.

ಬೆಂಗಳೂರಿನ ಬನಶಂಕರಿಯ ಸರಬಂಡೆ ಪಾಳ್ಯದ ಯುವಕ ದಿವಾಕರ್ ಕೊಲೆಯಾದವ. ಜ.20ರಂದು ಚಿನ್ನ ಖರೀದಿಸಿ ಬರುವೆ ಎಂದು ಮನೆಯಿಂದ 5 ಲಕ್ಷ ರೂಪಾಯಿ ತೆಗದುಕೊಂಡು ಹೋಗಿದ್ದ ದಿವಾಕರ್ ವಾಪಸ್​ ಬಂದಿರಲಿಲ್ಲ. ಕಡಿಮೆ ಬೆಲೆಗೆ ಚಿನ್ನ ಕೊಡ್ತೀವಿ ಅಂತಾ ಕರೆದ ದುಷ್ಕರ್ಮಿಗಳು ಸುಂಕದಕಟ್ಟೆಯಲ್ಲಿ ದಿವಾಕರ್​ನನ್ನು ಕೊಂದು ಶವವನ್ನು ಮೂಟೆಕಟ್ಟಿ ಬೈಕ್ ಸಮೇತ ಮಾಗಡಿ ಕೆರೆಯಲ್ಲಿ ಎಸೆದು ಪರಾರಿಯಾಗಿದ್ದರು. ಇದ್ಯಾವುದರ ಮಾಹಿತಿ ಗೊತ್ತಿಲ್ಲದ ಪಾಲಕರು, ಮಗ ದಿವಾಕರ್​ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದರು. ಇತ್ತ ಪೊಲೀಸರು ದಿವಾಕರ್​ಗಾಗಿ ಹುಡುಕಾಟ ನಡೆಸುತ್ತಿದ್ದರು. ಅತ್ತ ಮಾಗಡಿ ಕೆರೆಯಲ್ಲಿ ಮೂಟೆಕಟ್ಟಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.

ಮಾಗಡಿಯಲ್ಲಿ ಸಿಕ್ಕ ಮೂಟೆಯಲ್ಲಿದ್ದ ಶವವನ್ನ ಜಾಲಾಡಿದ ಪೊಲೀಸರಿಗೆ ಐಡಿ ಕಾರ್ಡ್​ ಪತ್ತೆಯಾಗಿತ್ತು. ಬಸವರಾಜು ಹೆಸರು, ಮನೆ ವಿಳಾಸ ಅದರಲ್ಲಿತ್ತು. ಕೂಡಲೇ ಬಸವರಾಜು ಮನೆಯವರನ್ನು ಸಂಪರ್ಕಿಸಿದ ಪೊಲೀಸರಿಗೆ ಇದು ಆತನ ಶವ ಎಂಬುದು ಖಚಿತವಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net