ಪ್ರೀತಿ-ಪ್ರಣಯಕ್ಕೆ ತಿರುಗಿದ ಮಿಸ್ಡ್​ ಕಾಲ್​ ಪರಿಚಯ! ಮುಂದ್ದಾಗಿದ್ದೆಲ್ಲವೂ ದುರಂತ

accused
Published on

ಮೈಸೂರು: 30 ವರ್ಷ ದಾಟದ ಯುವಕ-ಯುವತಿ ಇಬ್ಬರಿಗೂ ಮಿಸ್ಡ್ ‌ಕಾಲ್ ಮೂಲಕ ಆದ ಪರಿಚಯ ಪ್ರೀತಿ-ಪ್ರೇಮಕ್ಕೆ ತಿರುಗಿ, ಇದೀಗ ದುರಂತ ಅಂತ್ಯ ಕಂಡಿದೆ.

ಮಿಸ್ಡ್ ‌ಕಾಲ್ ಮೂಲಕ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡಿದ್ದ 26 ವರ್ಷದ ಸಲಾವುದ್ದೀನ್ ಎಂಬಾತ, ಆಕೆಯನ್ನ ಪ್ರೀತಿ ಬಲೆಗೆ ಬೀಳಿಸಿಕೊಂಡಿದ್ದ. ಮದುವೆ ಆಗವುದಾಗಿ ಪುಸಲಾಯಿಸಿ ಲೈಂಗಿಕ ಸಂಪರ್ಕವನ್ನೂ ಬೆಳೆಸಿದ್ದ. 5 ವರ್ಷದಿಂದ ಪ್ರೀತಿಯ ನಾಟಕವಾಡಿ ಎಲ್ಲವೂ ಮುಗಿದ ಮೇಲೆ ಕೈಕೊಟ್ಟಿದ್ದಾನೆ. ಅಷ್ಟೇ ಅಲ್ಲ, ತನ್ನ ಪ್ರಿಯಕರನಿಗೆ ಈಗಾಗಲೇ ಬೇರೊಬ್ಬಳೊಂದಿಗೆ ಮದುವೆಯೂ ಆಗಿದೆ ಎಂಬ ಕರಾಳ ಸತ್ಯವೂ ಯುವತಿಗೆ ಗೊತ್ತಾಗಿದೆ.

ಅಷ್ಟರಲ್ಲಿ ದೇಹ ಮತ್ತು ಹಣವನ್ನು ಪ್ರಿಯಕರನಿಗೆ ಒಪ್ಪಿಸಿದ್ದ ಯುವತಿ ಇದೀಗ ನ್ಯಾಯಕ್ಕಾಗಿ ನಂಜನಗೂಡು ಪೊಲೀಸ್ ​ಠಾಣೆ ಮೆಟ್ಟಿಲೇರಿದ್ದಾಳೆ. ತನ್ಗಾದ ಅನ್ಯಾದ ಬ್ಗಗೆ ಎಲ್ಲಿಯಾದರೂ ಬಾಯಿಬಿಟ್ಟರೆ ಕೊಲೆ ಮಾಡುವುದಾಗಿ ಪ್ರಿಯಕರ ಬೆದರಿಕೆ ಹಾಕಿದ್ದಾನೆ ಎಂದೂ ವಿವರಿಸಿದ್ದಾಳೆ.

ನಂಜನಗೂಡಿನಲ್ಲಿ ಹೋಲ್ ಸೇಲ್ ಹಣ್ಣಿನ ವ್ಯಾಪಾರಿಯಾಗಿದ್ದ ಸಲಾವುದ್ದೀನ್ ನನ್ನು ಯುವತಿ ಕೊಟ್ಟ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net