ಪೌರಕಾರ್ಮಿಕರ ವಸತಿ ಪ್ರದೇಶದಲ್ಲಿ ಸೌಲಭ್ಯ ಮರೀಚಿಕೆ

Published on

ಟೀಕೆಗೆ ಗುರಿಯಾದ ನಗರಸಭೆ ರ್ನಿಲಕ್ಷ$್ಯ | ಗಬ್ಬು ನಾರುತ್ತಿರುವ ಈಡೀ ವಾತಾವರಣ

ಗೌರಿಬಿದನೂರು: ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಮಳೆ, ಗಾಳಿ, ಬಿಸಿಲು ಎನ್ನದೆ ಕಷ್ಟಪಡುವ ಶ್ರಮ ಜೀವಿಗಳು ಅವರು. ಆದರೆ, ಅವರಿಗೆ ಕಲ್ಪಿಸಿಕೊಟ್ಟಿರುವ ವಸತಿ ಪ್ರದೇಶವೇ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ನಗರದ ಮಾದನಹಳ್ಳಿ ಸರ್ಕಾರಿ ಹೊಂಡು ಬಿಡು ಜಮೀನಿನಲ್ಲಿ ವಸತಿ ಯೋಜನೆಯಡಿ 30 ಪೌರಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಲಾಗಿತ್ತು.110ಕ್ಕೂ ಹೆಚ್ಚು ಮಂದಿ ಇಲ್ಲಿ ವಾಸಿಸುತ್ತಿದ್ದಾರೆ.3 ವರ್ಷ ಕಳೆದರೂ ಅವರಿಗೆ ಹಕ್ಕು ಪತ್ರ ನೀಡಿಲ್ಲ, ಸೌಲಭ್ಯಗಳನ್ನೂ ಕಲ್ಪಿಸಿಲ್ಲ.30 ಮನೆಗಳ ಪೈಕಿ 5 ಮನೆಗಳಿಗೆ ಒಂದರಂತೆ ಚೇಂಬರ್​ ಮಾಡಿ ಸ್ನಾನ ಗೃಹದ ನೀರು ಒಂದೇ ಗುಂಡಿಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಚೇಂಬರ್​ ತುಂಬಿ ವಸತಿ ನಿಲಯಗಳ ತ್ಯಾಜ್ಯ, ಚರಂಡಿ ನೀರು ರಸ್ತೆಯಲ್ಲಿ ಸಂಗ್ರಹವಾಗುತ್ತಿದೆ. ದುರ್ವಾಸನೆಯಿಂದ ಗಬ್ಬು ನಾರುತ್ತಿದೆ. ಅನೈರ್ಮಲ್ಯದ ಪರಿಣಾಮ ಕಾರ್ಮಿಕರ ಮಕ್ಕಳಿಗೆ ವಾರದಿಂದ ಜ್ವರ ಇನ್ನಿತರ ರೋಗಗಳು ಕಾಡುತ್ತಿವೆ. ನಗರದ ಸ್ವಚ್ಛತಾ ಕಾರ್ಯ ಮಾಡುವವರ ಪ್ರದೇಶದಲ್ಲೇ ಸ್ವಚ್ಛತೆ ಇಲ್ಲದಾಗಿದೆ. 30 ಮನೆಗಳಲ್ಲಿ ದೊಡ್ಡ್ಡಿ ನಿರ್ಮಿಸಿ ಶೌಚಗೃಹದ ನೀರನ್ನು ಅದಕ್ಕೆ ಸಂಪರ್ಕ ಕಲ್ಪಿಸಿದ್ದರೆ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಆದರೆ ಪೈಪ್​ಲೈನ್​ ಚರಂಡಿ ಮಾಡಿರುವುದೇ ಈ ಅವ್ಯವಸ್ಥೆಗೆ ಕಾರಣವಾಗಿದೆ. ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಆ ಕಡೆ ತಿರುಗಿ ನೋಡುತ್ತಿಲ್ಲ ಎಂದು ಪೌರಕಾರ್ಮಿಕರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಸ್ವಚ್ಛತೆ, ಪರಿಸರ ಕಾಪಾಡುವ ಮೂಲಕ ಜನರ ಹಿತ ಕಾಪಾಡುತ್ತೇವೆ. ಆದರೆ ನಮ್ಮ ಹಿತ ಕಾಪಾಡುವವರು ಯಾರು? ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು. ಆರೋಗ್ಯದಿಂದ ವಾಸಿಸಲು ಅನುವು ಮಾಡಿಕೊಡಬೇಕು. ಹಕ್ಕುಪತ್ರ ನೀಡಿ ಎನ್ನುತ್ತಾರೆ ಕಾರ್ಮಿಕರು.

ಪೌರಕಾರ್ಮಿಕರು ತಮ್ಮ ವಸತಿ ಪ್ರದೇಶದ ಸಮಸ್ಯೆ ನನ್ನ ಗಮನಕ್ಕೆ ತಂದಿದ್ದಾರೆ. ತ್ಯಾಜ್ಯ ನೀರು ವೈಜ್ಞಾನಿಕ ವಿಲೇವಾರಿ ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

|  ಲ್ಮನಾರಾಯಣಪ್ಪ ನಗರಸಭೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net