

ನರಗುಂದ: ನೀರು ಕುಡಿಯಲು ಕೆರೆಗೆ ಹೋದ ಮಾನಸಿಕ ಅಸ್ವಸ್ಥನೊಬ್ಬ ಕೆರೆಯಲ್ಲಿಯೇ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುಣಸೀಕಟ್ಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಶಂಕರಗೌಡ ಮೇಲಗಿರಿಗೌಡ ಹುಡೇದಮನಿ (40) ಮೃತಪಟ್ಟ ವ್ಯಕ್ತಿ.
ವಿವಾಹಿತನಾಗಿದ್ದ ಶಂಕರಗೌಡ ಅವರಿಗೆ ವೈಯಕ್ತಿಕವಾಗಿ ಕೌಟುಂಬಿಕ ಸಮಸ್ಯೆ ಇತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರು ಎನ್ನಲಾಗುತ್ತಿದೆ. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಗ್ರಾಮದ ದೊಡ್ಡ ಕುಡಿಯುವ ನೀರಿನ ಕೆರೆಯಲ್ಲಿ ಜಿಗಿದು ಆತ್ಮಹತ್ಯೆಗೆ ಶರಣನಾಗಿದ್ದಾನೆ.
ಈ ಕುರಿತು ಪ್ರಭುಗೌಡ ಹುಡೇದಮನಿ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಎಸ್ಐ ಡಿ.ಕೆ. ಹಾಲವರ ತನಿಖೆ ಕೈಗೊಂಡಿದ್ದಾರೆ.