ಮೇಲುಕೋಟೆ ಬಾಹುಬಲಿ ಖ್ಯಾತಿಯ ರಾಮಸ್ವಾಮಿ ಅಯ್ಯಂಗಾರ್ ಇನ್ನಿಲ್ಲ

melukote bahubali
Published on

ಮಂಡ್ಯ: ಮೇಲುಕೋಟೆ ಬಾಹುಬಲಿ ಖ್ಯಾತಿಯ ರಾಮಸ್ವಾಮಿ ಅಯ್ಯಂಗಾರ್ ಅವರು ಮಂಗಳವಾರ ನಿಧನರಾದರು.

6 ದಶಕಗಳಿಂದಲೂ‌ ಪಾಂಡವಪುರ ತಾಲೂಕಿನ ಮೇಲುಕೋಟೆ ಬೆಟ್ಟದ ಮೇಲಿನ ಯೋಗನರಸಿಂಹ ಸ್ವಾಮಿ ದೇಗುಲಕ್ಕೆ ರಾಮಸ್ವಾಮಿ ಅಯ್ಯಂಗಾರ್ ನೀರನ್ನು ಹೊತ್ತೊಯ್ಯುತ್ತಿದ್ದರು. ದೇವರ ಅಭಿಷೇಕ ಮತ್ತು ಪ್ರಸಾದ ತಯಾರಿಕೆಗೆ ಬೆಟ್ಟದ ಕೆಳಗಿನ ಕೊಳದಿಂದ ದೊಡ್ಡ ಪಾತ್ರೆಯಲ್ಲಿ ನೀರು ತುಂಬಿಕೊಂಡು ಪ್ರತಿನಿತ್ಯ ಬೆಟ್ಟ ಹತ್ತುತ್ತಿದ್ದರು.

ವಯಸ್ಸು 60 ದಾಟಿದ್ರು ನೀರು ತುಂಬಿದ್ದ ಪಾತ್ರೆ ಹೊತ್ತುಕೊಂಡು ನಿತ್ಯ ನಾಲ್ಕೈದು ಬಾರಿ ಕಡಿದಾದ ಬೆಟ್ಟವನ್ನು ಹತ್ತುತ್ತಿದ್ದರು. ಇವರ ಅಗಾಧ ಶಕ್ತಿ ಮತ್ತು ದೃಢಕಾಯ ಶರೀರ ಕಂಡು ಸ್ಥಳೀಯರು ಮತ್ತು ಭಕ್ತರು 'ಮೇಲುಕೋಟೆ ಬಾಹುಬಲಿ' ಎಂದೇ ಕರೆಯುತ್ತಿದ್ದರು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ರಾಮಸ್ವಾಮಿ ಅಯ್ಯಂಗಾರ್ ಇಂದು ಕೊನೆಯುಸಿರೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net