

ರಾಮನಗರ: ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮೇಕೆದಾಟು 2.0 ಪಾದಯಾತ್ರೆ ಆರಂಭಿಸಿಸಿದ್ದು, 3ನೇ ದಿನದ ಪಾದಯಾತ್ರೆ ಮಂಗಳವಾರ ಬೆಂಗಳೂರು ವಿವಿ ಗೇಟ್ ಸಮೀಪ ಮೈಸೂರು ರಸ್ತೆ ಪೂರ್ಣಿಮ ಹಾಲ್‌ನಿಂದ ಪ್ರಾರಂಭಗೊಂಡಿದೆ.
ಮೆಟ್ರೋ ಸ್ಟೇಷನ್ ಬಳಿ ಗೋವಿಂದರಾಜನಗರ, ವಿಜಯನಗರ ಭಾಗದ ಕಾರ್ಯಕರ್ತರು ಪಾದಯಾತ್ರೆಗೆ ಪೂರ್ಣಕುಂಭ ಸ್ವಾಗತ ನೀಡಿದರು. ಮಹಿಳೆಯರು ಕಳಸ ಹೊತ್ತು ಬಂದರು. ಡೊಳ್ಳುಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಪಾದಯಾತ್ರೆ ಸ್ವಾಗತಕ್ಕೆ ಮೆರುಗು ನೀಡಿದವು. ಮೂರನೇ ದಿನ ಪಾದಯಾತ್ರೆಯಲ್ಲಿ ಗೋವಿಂದರಾಜನಗರ, ವಿಜಯನಗರ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.
ಇಂದು ಎಲ್ಲೆಲ್ಲಿ ಯಾತ್ರೆ?: ಮಂಗಳವಾರ ಬೆಳಗ್ಗೆ ಜ್ಞಾನ ಭಾರತಿ ಮೆಟ್ರೋ ಸ್ಟೇಷನ್ ಬಳಿಯಿಂದ ಹೊರಟಿರುವ ಪಾದಯಾತ್ರೆ, ನಾಯಂಡಹಳ್ಳಿ, ಪೆಸೆಟ್ ಕಾಲೇಜು ಜಂನ್, ಕತ್ರಿಗುಪ್ಪೆ ಮುಖ್ಯರಸ್ತೆ ಜಂನ್, ಕದಿರೇನಹಳ್ಳಿ, ಬನಶಂಕರಿ ದೇವಾಲಯ, ಜಯದೇವ ಆಸ್ಪತ್ರೆ ಬಳಿ ಸಾಗಲಿದೆ.