ಮೈಸೂರಲ್ಲಿ ತ್ರಿನೇಶ್ವರನ ದರ್ಶನಕ್ಕೆ ಭಕ್ತರ ದಂಡು: ಅಪರೂಪದ ಚಿನ್ನದ ಕೊಳಗ ಕಣ್ತುಂಬಿಕೊಳ್ಳಲು ಕಾತರ, ಇಲ್ಲಿದೆ ವಿಶೇಷತೆ

mysore trineshwara kolaga
Published on

ಮೈಸೂರು: ಮಹಾಶಿವರಾತ್ರಿ ಹಬ್ಬದ ಸಡಗರ-ಸಂಭ್ರಮದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮಿಂದೇಳುತ್ತಿದೆ. ಮನೆ ಮನಗಳಲ್ಲಿ ಮತ್ತು ಮಠ-ಮಂದಿರದಲ್ಲಿ ಶಿವನಾಮ ಸ್ಮರಣೆ, ಶಿವನಾಮ ಜಪ ಶುರುವಾಗಿದೆ. ಶಿವರಾತ್ರಿಯ ಪ್ರಮುಖ ಆಕರ್ಷಣೆಯಾದ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಸ್ಥಾನದಲ್ಲೂ ಭರದ ಸಿದ್ಧತೆಗಳು ಜರುಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಖಜಾನೆಯಲ್ಲಿದ್ದ ಚಿನ್ನದ ಕೊಳಗ (ಮುಖವಾಡ)ವನ್ನು ದೇವಾಲಯಕ್ಕೆ ಹಸ್ತಾಂತರಿಸಲಾಗಿದೆ. ದೇವರ ಕೊಳಗವನ್ನು ದೇವಾಲಯದ ಅರ್ಚಕರಿಗೆ ನೀಡಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ಶಿವಲಿಂಗಕ್ಕೆ ಧಾರಣೆಯಾಗುವ 11 ಕೆಜಿ ಅಪರಂಜಿ ಚಿನ್ನದ ಮುಖವಾಡ ನೋಡಲು ಭಕ್ತರ ದಂಡೇ ಹರಿದು ಬರುತ್ತಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್​ ಜನಿಸಿದ ಸಂದರ್ಭದಲ್ಲಿ ಜಯಚಾಮರಾಜ ಒಡೆಯರ್​ ಅವರು ಅರಮನೆ ಆವರಣದಲ್ಲಿರುವ ತ್ರಿನೇತ್ರಸ್ವಾಮಿ ದೇವಾಲಯ, ನಂಜನಗೂಡಿನ ನಂಜುಂಡೇಶ್ವರ ದೇವಾಲಯ ಹಾಗೂ ಮಲೆ ಮಹದೇಶ್ವರಸ್ವಾಮಿ ದೇವಾಲಯಕ್ಕೆ ಚಿನ್ನದ ಕೊಳಗ ನೀಡಿದ್ದರು. ನಂಜನಗೂಡು ಹಾಗೂ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ನಿತ್ಯ ಚಿನ್ನದ ಕೊಳಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ಭದ್ರತೆ ದೃಷ್ಟಿಯಿಂದ ಶ್ರೀ ತ್ರಿನೇಶ್ವರಸ್ವಾಮಿ ದೇವಾಲಯದ ಕೊಳಗವನ್ನು ಜಿಲ್ಲಾ ಖಜಾನೆಯಲ್ಲಿ 1982 ರಿಂದೀಚೆಗೆ ಇಡಲಾಗುತ್ತಿದ್ದು, ವರ್ಷಕ್ಕೊಮ್ಮೆ (ಶಿವರಾತ್ರಿ ಮುನ್ನಾದಿನ) ಮಾತ್ರ ಹೊರತೆಗೆದು ಶಿವರಾತ್ರಿಯಂದು ಪೂಜೆ ಸಂದರ್ಭದಲ್ಲಿ ಬಳಸುವ ಸಂಪ್ರದಾಯವಿದೆ.

ಕೊಳಗವನ್ನು ದೇವಾಲಯಕ್ಕೆ ತಂದ ಬಳಿಕ ಅದಕ್ಕೆ ಪೂಜೆ ಸಲ್ಲಿಸಿ ಕೊಠಡಿಯೊಂದರಲ್ಲಿ ಇಡಲಾಗಿದೆ. ಮಂಗಳವಾರ ಬೆಳಗಿನ ಜಾವ 4.30ರಿಂದ ದೇವಾಲಯದಲ್ಲಿ ಅರ್ಚನೆ, ಅಭಿಷೇಕ ನಡೆದಿದ್ದು, ತ್ರಿನೇಶ್ವರಸ್ವಾಮಿ ದೇವಾಲಯದ ಮೂಲದೇವರಿಗೆ ಚಿನ್ನದ ಕೊಳಗ ಧಾರಣೆ ಮಾಡಲಾಗಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ಬೆಳಗ್ಗೆ 6ರಿಂದ ರಾತ್ರಿ 12 ಗಂಟೆವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Koo App
ನಾಡಿನ ಸಮಸ್ತ ಮಹಾಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡಿನ ಸಂಕಷ್ಟಗಳೆಲ್ಲವನ್ನೂ ಪರಿಹರಿಸಿ, ಆ ಮಹಾಮಹೀಶ್ವರ ಸಕಲ ಜೀವರಾಶಿಗಳಿಗೂ ಒಳಿತನ್ನು ಮಾಡಲೆಂದು ವಿಶೇಷವಾಗಿ ಪ್ರಾರ್ಥಿಸುತ್ತೇನೆ. #MahaShivaratri
View attached media content
-Basavaraj Bommai (@bsbommai)1 Mar 2022
Koo App
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು. ಈ ಶುಭ ದಿನವು ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಸುಖ-ಶಾಂತಿ, ಆರೋಗ್ಯ, ಸಕರಾತ್ಮಕತೆಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ. ಹರ ಹರ ಮಹಾದೇವ! #OmNamahShivaya #Mahashivaratri
View attached media content
-Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan)1 Mar 2022
Koo App
ರಾಜ್ಯದ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು - ಶ್ರೀ ನಳಿನ್ ಕುಮಾರ್ ಕಟೀಲ್, ರಾಜ್ಯಾಧ್ಯಕ್ಷರು.
View attached media content
-BJP KARNATAKA (@BJP4Karnataka)1 Mar 2022
Koo App
ಗರಿಷ್ಠರತ್ನಲೋಷ್ಠಯೋಃ ಸಹೃದ್ವಿಪಕ್ಷಪಕ್ಷಯೋಃ| ತೃಣಾರವಿಂದಚಕ್ಷುಷೋಃ ಪ್ರಜಾಮಹೀಮಹೇಂದ್ರಯೋಃ| ಸಮಂ ಪ್ರವರ್ತಯನ್ಮನಃ ಕದಾ ಸದಾಶಿವಂ ಭಜೇ|| ಸಮಸ್ತ ಜನತೆಗೆ ಮಹಾಶಿವರಾತ್ರಿಯ ಪಾವನಪರ್ವದ ಭಕ್ತಿಪೂರ್ವಕ ಶುಭ ಕಾಮನೆಗಳು. ಜಗದ್ರಕ್ಷಕನಾದ ಉಮಾಪತಿಯು ಎಲ್ಲರ ಬಾಳಿನ ಅಂಧಕಾರವನ್ನು ಕಳೆದು ಉಜ್ವಲ ಭವಿಷ್ಯದ ಜ್ಯೋತಿ ಬೆಳಗಿಸಲಿ ಎಂದು ಪ್ರಾರ್ಥಿಸುತ್ತೇನೆ
View attached media content
-Araga Jnanendra (@aragajnanendra)1 Mar 2022
Koo App
ಗಂಗಾಧರೋ ಲಲಾಟಾಕ್ಷಃ ಕಾಲಕಾಲಃ ಕೃಪಾನಿಧಿಃ| ಭೀಮಃ ಪರಶುಹಸ್ತಶ್ಚ ಮೃಗಪಾಣಿರ್ಜಟಾಧರಃ|| ಎಲ್ಲರಿಗೂ ಪರಮೇಶ್ವರನನ್ನು ಆರಾಧಿಸುವ ಮಹಾಶಿವರಾತ್ರಿಯ ಭಕ್ತಿಪೂರ್ವಕ ಶುಭಾಶಯಗಳು. ಗಂಗಾಧರನು ಎಲ್ಲರ ಕಷ್ಟ ಕೋಟಲೆಗಳನ್ನು ತೊಡೆದು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ. #Mahashivaratri
View attached media content
-ಕೆ ಗೋಪಾಲಯ್ಯ (@kgopaliahbjp)1 Mar 2022
Koo App
ಈ ಮಹಾಶಿವರಾತ್ರಿಯಂದು ಶಿವನು ನಿಮ್ಮ ಎಲ್ಲಾ ದುಃಖವನ್ನು ನಾಶ ಮಾಡಲಿ ಮತ್ತು ಸಂತೋಷದಾಯಕ ಮತ್ತು ಆರೋಗ್ಯಕರ ಜೀವನ ನಿಮ್ಮದಾಗಲಿ. ಓಂ ನಮಃ ಶಿವಾಯ. ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
View attached media content
-Dr. Murugesh R Nirani (@murugesh_nirani)1 Mar 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net