ಬೆಂಗಳೂರಲ್ಲಿ ಸಾಗುತ್ತಿದೆ ಮೇಕೆದಾಟು ಪಾದಯಾತ್ರೆ: ಪ್ರಯಾಣಿಕರಿಗೆ ಟ್ರಾಫಿಕ್​ ಜಾಮ್​ ಬಿಸಿ

mekedatu padyatare trafic
Published on

ಬೆಂಗಳೂರು: 3ನೇ ದಿನದ ಮೇಕೆದಾಟು ಪಾದಯಾತ್ರೆ ಮಂಗಳವಾರ ಬೆಳಗ್ಗೆ ಜ್ಞಾನ ಭಾರತಿ ಮೆಟ್ರೋ ಸ್ಟೇಷನ್​ ಬಳಿಯಿಂದ ಹೊರಟಿದ್ದು, ಪ್ರಯಾಣಿಕರಿಗೆ ಟ್ರಾಫಿಕ್​ ಜಾಮ್​ ಕಿರಿಕಿರಿ ಬಿಸಿ ತಟ್ಟಿದೆ.

ಪಾದಯಾತ್ರೆಯು ನಾಯಂಡಹಳ್ಳಿ, ಪೆಸೆಟ್​ ಕಾಲೇಜು ಜಂನ್​, ಕತ್ರಿಗುಪ್ಪೆ ಮುಖ್ಯರಸ್ತೆ ಜಂನ್​, ಕದಿರೇನಹಳ್ಳಿ, ಬನಶಂಕರಿ ದೇವಾಲಯ, ಜಯದೇವ ಆಸ್ಪತ್ರೆ ಬಳಿ ಸಾಗಲಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಬೆಳಗ್ಗೆಯೇ ಕಂಡು ಬಂತು.

ಬೆಂಗಳೂರು-ಮೈಸೂರು ಹೆದ್ದಾರಿಯ ಬೆಂಗಳೂರು ಕಡೆಗಿನ ಸಂಚಾರ ಬಂದ್​ ಮಾಡಿರುವ ಕಾರಣ ಬಹುತೇಕ ಪ್ರಯಾಣಿಕರು ಪರಿತಪಿಸುವಂತೆ ಆಗಿದೆ. ಸುತ್ತಿ ಬಳಸಿ ಬೆಂಗಳೂರು ಸೇರಬೇಕಾದ ಸಂಕಷ್ಟ ಪ್ರಯಾಣಿಕರದ್ದಾಗಿದೆ. ಈ ಹಿನ್ನೆಲೆಯಲ್ಲಿ ನಮಗ್ಯಾಕೆ ತೊಂದರೆ ಕೊಡುತ್ತೀರಿ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net