ಇಂದು ರೈತ ಸಂಘದ ಕಾರ್ಯಕರ್ತರ ಸಭೆ

IMG-20231119-WA0097
ಎಸ್.ದಯಾನಂದ್
Published on

ಪಾಂಡವಪುರ: ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆಯಲ್ಲಿ ಜ.17ರಂದು ಬೆಳಗ್ಗೆ 11ಕ್ಕೆ ರೈತಸಂಘ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಭೆ ಆಯೋಜಿಸಲಾಗಿದೆ.

ರೈತನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಜನ್ಮ ದಿನಾಚರಣೆ ಹಾಗೂ ಭರ್ಜರಿ ಯಶಸ್ಸು ಕಾಣುತ್ತಿರುವ ಕಾಟೇರ ಚಿತ್ರದಲ್ಲಿ ನಾಯಕ ನಟ ದರ್ಶನ್ ತೂಗುದೀಪ ಅವರು ಜಮೀನ್ದಾರಿ ಪದ್ಧತಿಯನ್ನು ವಿರೋಧಿಸುವ ಜತೆಗೆ ಉಳುವವನೇ ಭೂಮಿಯ ಒಡೆಯನ್ನಾಗಿಸಲು ಇಂದಿರಾಗಾಂಧಿ ಅವರು ಜಾರಿಗೆ ತಂದ ಕಾಯ್ದೆಯ ಪ್ರಕಾರ ರೈತರಿಗೆ ಭೂಮಿ ಒದಗಿಸಲು ನಡೆಸುವ ಹೋರಾಟದ ಮನೋಜ್ಞ ಅಭಿನಯ ಹಾಗೂ ಸಿನಿಮಾದಲ್ಲಿ ಗೇಣಿ ಪದ್ಧತಿಯಡಿ ರೈತರು ಅನುಭವಿಸುತ್ತಿದ್ದ ಯಾತನೆಯನ್ನು ಮನಮುಟ್ಟುವಂತೆ ಚಿತ್ರಿಸಿಕರೀಸಲಾಗಿದೆ. ಹೀಗಾಗಿ ಸಿನಿಮಾ ತಂಡಕ್ಕೆ ಹಾಗೂ ನಾಯಕ ನಟ ದರ್ಶನ್ ಅವರಿಗೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮ ರೂಪಿಸುವ ಕುರಿತು ಚರ್ಚಿಸಲು ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ ಎಂದು ರೈತಸಂಘ ಮುಖಂಡ, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net