ಪೂರ್ವಭಾವಿ ಸಭೆ ಕರೆಯದ ಮೇಯರ್

SUVARNA KALLAGUNTLA
Published on

ಹುಬ್ಬಳ್ಳಿ: ಮಹಾನಗರ ಪಾಲಿಕೆ ಸಾಮಾನ್ಯ ಸಭೆಗೆ ಮುಂಚೆ ಪೂರ್ವಭಾವಿ ಸಭೆ ಕರೆಯುವಂತೆ ಮಹಾಪೌರರಿಗೆ ಮನವಿ ಮಾಡಿದ್ದರೂ ಅವರು ಸ್ಪಂದಿಸಿಲ್ಲ ಎಂದು ಪಾಲಿಕೆ ಪ್ರತಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲಾ ದೂರಿದ್ದಾರೆ.


ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ. 31ರಂದು ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕ್ಷುಲ್ಲಕ ವಿಷಯಗಳನ್ನು ಚರ್ಚೆಗೆ ಆಯ್ಕೆ ಮಾಡಲಾಗಿದೆ. ಜ್ವಲಂತ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದೆ. ಮಹಾಪೌರರಿಗೆ ಇರುವ ಅನುಭವದ ಕೊರತೆಯೇ ಇದಕ್ಕೆ ಕಾರಣ ಎಂದು ಟೀಕಿಸಿದರು.

ಪಾಲಿಕೆ ಮುಕ್ತಿ ವಾಹನಗಳಿಗೆ ಚಾಲಕರನ್ನು ನೇಮಿಸಿ, ಅವರಿಗೆ 10 ಸಾವಿರ ರೂ. ವೇತನ ನೀಡುವುದನ್ನು ಚರ್ಚೆಯ ಪ್ರಮುಖ ವಿಷಯವನ್ನಾಗಿ ಪರಿಗಣಿಸಲಾಗಿದೆ ಎಂದರು.

ಕುಡಿಯುವ ನೀರಿನ ಸಮಸ್ಯೆ, ಶಿವಾಜಿ ಮೂರ್ತಿ ಪ್ರತಿಷ್ಠಾಪನೆ, ಉಣಕಲ್ಲ ಕೆರೆ ಸ್ವಚ್ಛತೆ, ಸ್ಮಾರ್ಟ್​ಸಿಟಿ ಕಾಮಗಾರಿಗಳ ಹಸ್ತಾಂತರ, ಹದಗೆಟ್ಟ ರಸ್ತೆ, ಸ್ವಚ್ಛತೆ, ಉದ್ಯಾನ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಆದ್ಯತೆಯ ವಿಷಯಗಳನ್ನಾಗಿ ಪರಿಗಣಿಸಬೇಕಿತ್ತು ಎಂದರು.


ಬಿಜೆಪಿಯಲ್ಲಿ ಇರುವ ಅನುಭವಿ ಸದಸ್ಯರು, ಮಹಾಪೌರರಿಗೆ ಆಡಳಿತದ ಬಗ್ಗೆ ಸೂಕ್ತ ಸಲಹೆ ಹಾಗೂ ತರಬೇತಿ ನೀಡಬೇಕಿತ್ತು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net