ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ನಿಧನ

Marakada Sri Narendranatha Swamiji
Published on

ಮಂಗಳೂರು: ಮರಕಡ ಶ್ರೀ ಗುರು ಪರಾಶಕ್ತಿ ಮಠದ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ಬುಧವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು.

ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ಅವರು ಮರಕಡದಲ್ಲಿ ಮೂಲ ಮಠ ಹೊಂದಿದ್ದರು. ತೊಕ್ಕೊಟ್ಟು ಸಮೀಪದ ಮಡ್ಯಾರ್ ಎಂಬಲ್ಲಿ ದೇವಸ್ಥಾನ ನಿರ್ಮಿಸಿದ್ದರು. ಕಂರ್ಬಿಸ್ಥಾನ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ನವೀಕರಣ ಕಾರ್ಯದಲ್ಲೂ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಮರಕಡದಲ್ಲಿ ಹೊಸ ದೇವಸ್ಥಾನ ಹಾಗೂ ಗುರು ಪೀಠ ನಿರ್ಮಾಣ ಹಂತದಲ್ಲಿದ್ದು, ಮುಂದಿನ ತಿಂಗಳು ಗುರುಪೀಠ ಲೋಕಾರ್ಪಣೆ ಮತ್ತು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಯಾಗಿತ್ತು.

ಇಂದು(ಗುರುವಾರ) ಮಧ್ಯಾಹ್ನ 3 ಗಂಟೆ ತನಕ ಮರಕಡ ಮಠದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 4ಕ್ಕೆ ಮಡ್ಯಾರ್​ನಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net