

ಬೆಂಗಳೂರು: ಮಂತ್ರಿ ಗ್ರೂಪ್ ಎಂಡಿ ಸುಶೀಲ್ ಪಾಂಡುರಂಗ ಅವರನ್ನು ಶನಿವಾರ ಇಡಿ ಅಧಿಕಾರಿಗಳು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ದಕ್ಷಿಣ ಭಾರತದ ಅತೀ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆ ಇದಾಗಿದ್ದು, ಹೂಡಿಕೆದಾರರಿಗೆ ವಂಚಿಸಿದ ಆರೋಪದಡಿ 2019ರ ಜುಲೈನಲ್ಲಿ ಮಂತ್ರಿ ಡೆವಲಪರ್ಸ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಏಳೆಂಟು ಪ್ರಕರಣ ದಾಖಲಾಗಿದ್ದವು. ಕಳೆದ ವರ್ಷ ಮಂತ್ರಿ ಗ್ರೂಪ್ ಮೇಲೆ ಐಟಿ ದಾಳಿಯಾಗಿತ್ತು. ಆಗ ಅನೇಕ ದಾಖಲೆಗಳನ್ನು ವಶಕ್ಕೆ ಪಡೆದಿದ್ದ ಐಟಿ ಅಧಿಕಾರಿಗಳು, ದಾಖಲೆಗಳ ಸಮೇತ ಇಡಿಗೆ ಮಾಹಿತಿ ನೀಡಿತ್ತು.
ವೈಯಕ್ತಿಕ ಮತ್ತು ಸಂಸ್ಥೆಯ ವ್ಯವಹಾರದಲ್ಲಿ ಅಕ್ರಮ ಆರೋಪ ಹಿನ್ನೆಲೆ ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ ಆಕ್ಟ್ ಅಡಿ ವಿಚಾರಣೆಗೆ ಹಾಜರಾಗುವಂತೆ ಸುಶೀಲ್ ಪಾಂಡುರಂಗ ಅವರಿಗೆ ಮೊನ್ನೆ ಇಡಿ ಸಮನ್ಸ್ ಜಾರಿ ಮಾಡಿತ್ತು. ನಿನ್ನೆ(ಶುಕ್ರವಾರ) ವಿಚಾರಣೆಗೆ ಹಾಜರಾಗಿದ್ದರು. ಇದೀಗ ಅವರನ್ನ ಬಂಧಿಸಲಾಗಿದೆ.