

ಚಿಕ್ಕೋಡಿ: ಮಹಾಮಾರಿ ಕರೊನಾ ರಾಜ್ಯದಲ್ಲಿ ಮರಣಮೃದಂಗ ಬಾರಿಸುತ್ತಿದ್ದು, ಸಾವಿನ ಸರಣಿ ಮುಂದುವರಿದಿದೆ. ಇದೀಗ ಮಾಜಿ ಶಾಸಕ ಮನೋಹರ್ ಕಟ್ಟಿಮನಿ(65) ಅವರೂ ಕೋವಿಡ್ಗೆ ಬಲಿಯಾಗಿದ್ದಾರೆ.
ಮನೋಹರ್ ಕಟ್ಟಿಮನಿ ಅವರಿಗೆ ಇತ್ತೀಚಿಗೆ ಕರೊನಾ ಸೋಂಕು ತಗುಲಿತ್ತು. ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಅಗಲಿದ್ದಾರೆ.
1999ರಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಜೆಡಿಯು ಪಕ್ಷದ ಶಾಸಕರಾಗಿ ಮನೋಹರ್ ಕಟ್ಟಿಮನಿ ಆಯ್ಕೆಯಾಗಿದ್ದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.