

ಚಿಕ್ಕಮಗಳೂರು: ನಿವೃತ ಡೆಪ್ಯುಟಿ ತಹಸೀಲ್ದಾರ್ವೊಬ್ಬರು ಕಾರಿನಲ್ಲಿ ಕುಳಿತುಕೊಂಡೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತರೀಕೆರೆ ತಾಲೂಕಿನ ಬೇಲೆನಹಳ್ಳಿ ತಾಂಡ್ಯದಲ್ಲಿ ಸಂಭವಿಸಿದೆ.
ಸೋಮನಾಯ್ಕ(72) ಆತ್ಮಹತ್ಯೆ ಮಾಡಿಕೊಂಡವರು. ಇಂದು ಮುಂಜಾನೆ ಕಾರಿನಲ್ಲಿ ತೋಟಕ್ಕೆ ಬಂದ ಸೋಮನಾಯ್ಕ ಅವರು ತೋಟದ ಕೋವಿಯಿಂದ ಗುಂಡು ಹಾರಿಸಿಕೊಂಡು ಸತ್ತಿದ್ದಾರೆ. ಕಾರಿನಲ್ಲಿ ಡೆತ್ನೋಟ್ ಸಿಕ್ಕಿದೆ. ಸಾವಿಗೂ ಮುನ್ನ ಮನದ ಆತಂಕವನ್ನ ಅಕ್ಷರಕ್ಕಿಳಿಸಿದ್ದು, ಸಾವಿನ ಕಾರಣ ಏನಂತೆ ಗೊತ್ತಾ?
ಕರೊನಾ ಸೋಂಕು ತಗುಲಿದೆ ಎಂಬ ವಿಷ್ಯ ಗೊತ್ತಾಗುತ್ತಿದ್ದಂತೆ ಕೆಲವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ನಿವೃತ ಡೆಪ್ಯುಟಿ ತಹಸೀಲ್ದಾರ್ ಕೂಡ ಇದೇ ಹಾದಿ ಹಿಡಿದದ್ದು ಕರೊನಾ ಭೀತಿಯ ಭೀಕರತೆ ಅದೆಷ್ಟು ಕ್ರೂರವಾಗಿದೆ ಎಂದು ಹೇಳಲು ಅಸಾಧ್ಯ.