ಒಬ್ಬಂಟಿಯಾಗಿ ಚಾರಣಕ್ಕೆ ಹೋಗಿದ್ದ ಬೆಂಗಳೂರಿನ ವೈದ್ಯ ನಾಪತ್ತೆ! ಕುಟುಂಬಸ್ಥರಲ್ಲಿ ಹೆಚ್ಚಿದ ಆತಂಕ

Manipal Hospital doctor Dr.Chandramohan
Published on

ಬೆಂಗಳೂರು: ಚಾರಣಕ್ಕೆಂದು ಹಿಮಾಲಯ ಪರ್ವತಕ್ಕೆ ಹೋಗಿದ್ದ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ.ಚಂದ್ರಮೋಹನ್ ನಾಪತ್ತೆಯಾಗಿದ್ದಾರೆ. ಒಂದು ವಾರದಿಂದ ಅವರ ಮೊಬೈಲ್​ ಸಂಪರ್ಕಕ್ಕೆ ಸಿಗುತ್ತಿಲ್ಲ. ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ವಸಂತನಗರದ ನಿವಾಸಿ ಡಾ.ಚಂದ್ರಮೋಹನ್, ಹಿಮಾಲಯ ಪರ್ವತಕ್ಕೆ ಚಾರಣ ಹೋಗುವುದಾಗಿ ಮೇ 3ರಂದು ಬೆಂಗಳೂರಿಂದ ತೆರಳಿದ್ದರು. ಒಬ್ಬಂಟಿಯಾಗಿ ಚಾರಣಕ್ಕೆ ತೆರಳಿದ್ದರು. ಮೇ 20ರ ನಂತರ ಇವರ ಮೊಬೈಲ್‌ ಸ್ವಿಚ್ಡ್​ ಆಫ್​ ಆಗಿದೆ. ಅಂದಿನಿಂದ ಕುಟುಂಬಸ್ಥರ ಸಂಪರ್ಕಕ್ಕೆ ಚಂದ್ರಮೋಹನ್​ ಸಿಕ್ಕಿಲ್ಲ. ಆತಂಕಗೊಂಡ ಕುಟುಂಬಸ್ಥರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ವೈದ್ಯನ ಹುಡುಕಾಟಕ್ಕೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net