ಮದ್ವೆ ಮನೆಯಲ್ಲಿ ಮಹಿಳೆಯರ ಜತೆ ಕುಳಿತು ಕರಿಮಣಿ ಸರ ಪೋಣಿಸಿದ ಶಾಸಕ ರೇಣುಕಾಚಾರ್ಯ!

renukacharya
Published on

ಹೊನ್ನಾಳಿ: ಮದುವೆ ಮನೆಯಲ್ಲಿ ಮಹಿಳೆಯರ ಜತೆ ಕುಳಿತು ತಾಳಿ ಸರ ಪೋಣಿಸುವ ಮೂಲಕ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಗಮನ ಸೆಳೆದಿದ್ದಾರೆ.

ಧಾರಾಕರ ಮಳೆಯಿಂದಾಗಿ ಉಂಟಾದ ಹಾನಿ ಪರಿಶೀಲನೆಗೆಂದು ಶಾಸಕರು ಶುಕ್ರವಾರ ತಾಲೂಕು ಆಡಳಿತದ ಜತೆ ಮಳೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅದೇ ಸಮಯಕ್ಕೆ ತರಗನಹಳ್ಳಿ ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಮಾಜಿ ಗ್ರಾಪಂ​ ಅಧ್ಯಕ್ಷ ಲೋಹಿತ್ ಅವರ ಸಹೋದರ ಬಸವರಾಜ್​ರ ಮದುವೆ ನಡೆಯುತ್ತಿತ್ತು.

ಇದೇ ವೇಳೆ ಮದುವೆಗೆ ಬಂದ ಶಾಸಕರಿಗೆ ಅಲ್ಲೇ ವರನ ಬಳಿ ಕುಳಿತು ತಾಳಿಗೆ ಕರಿಮಣಿ ಪೋಣಿಸುತ್ತಿದ್ದ ಮಹಿಳೆಯರು 'ಬನ್ನಿ ಸಾರ್​ ನೀವು ಮಣಿ ಪೋಣಿಸಿ' ಎಂದು ಆಹ್ವಾನಿಸಿದರು. ನಗುತ್ತಲೇ ಕುಳಿತ ಶಾಸಕು ಕರಿಮಣಿ ಪೋಣಿಸಿ ವರನ ಕೈಗಿಟ್ಟು ಶುಭಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net