ಮಂಡ್ಯದಲ್ಲಿ ಇದೆಂಥಾ ಅಸಹ್ಯ? ಗ್ರಾಮದೇವತೆ ಹಬ್ಬದಲ್ಲಿ ಬಾಲಕನನ್ನು ಎಳೆದಾಡಿ ಅಶ್ಲೀಲವಾಗಿ ವರ್ತಿಸಿದ ನರ್ತಕಿಯರು!

New Project(15)
Published on

ಮಂಡ್ಯ: ಗ್ರಾಮ ದೇವತೆ ಹಬ್ಬದಲ್ಲಿ ತುಂಡುಡುಗೆ ತೊಟ್ಟ ಮಹಿಳಾ ಡಾನ್ಸರ್​ಗಳು ವೇದಿಕೆಯಲ್ಲಿ ಮಾದಕ ನೃತ್ಯ ಮಾಡುತ್ತಾ, ಜನರ ಮುಂದೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ.

ಬಾಲಕನೊಬ್ಬನನ್ನು ವೇದಿಕೆಗೆ ಕರೆದು ಮುತ್ತಿಟ್ಟು ಡಬಲ್​ ಮೀನಿಂಗ್​ ಸನ್ನೆ ಮಾಡುತ್ತಾ ಬಾಲಕನಿಗೆ ಕಿರಿಕಿರಿ ಕೊಟ್ಟಿದ್ದಾರೆ. ಮಾದಕ ಹುಡುಗಿಯರ ಅಶ್ಲೀಲ ವರ್ತನೆ ಗ್ರಾಮದ ಮಹಿಳೆಯರು ಮತ್ತು ನಾಗರಿಕರಿಗೆ ಹಿರಿಸುಮುರಿಸು ಉಂಟು ಮಾಡಿದೆ.

ಈ ಎಲ್ಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇವರ ಕಾರ್ಯಕ್ಕೆ ಇಂತಹವರನ್ನ ಕರೆಸಿದ್ಯಾಕೆ? ಇದ್ಹೇನು ಪಬ್​ ಕಾರ್ಯಕ್ರಮವೇ ಎಂದು ಆಯೋಜಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಂದಹಾಗೆ ಈ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತೊಳಸಿಕೊಂಬರಿ ಗ್ರಾಮ ನಡೆದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮಾದಕ ಡ್ಯಾನ್ಸ್​ಗೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಭಾಗವಹಿಸಿದ್ದರು.

ಗ್ರಾಮದೇವತೆ ಹಬ್ಬದ ಹಿನ್ನೆಲೆಯಲ್ಲಿ ತೊಳಸಿಕೊಂಬರಿ ಗ್ರಾಮದಲ್ಲಿ ರಸಮಂಜನರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಡ್ಡೆ ಹುಡುಗಿಯರನ್ನು‌ ಕರೆಸಿ ಮಧ್ಯರಾತ್ರಿವರೆಗೂ ಮಾದಕ‌ ನೃತ್ಯ ಮಾಡಿಸಲಾಗಿದೆ. ಪಡ್ಡೆ ಹುಡುಗರನ್ನ ಹುಚ್ಚೆಬ್ಬಿಸುವ ಭರದಲ್ಲಿ ಆ ಡಾನ್ಸ್​ರ್​ಗಳು ಇದೊಂದು ದೇವರ ಹಬ್ಬದ ಹಿನ್ನೆಲೆ ಆಯೋಜಿಸುವ ಕಾರ್ಯಕ್ರಮ ಎಂಬುದನ್ನೂ ಮರೆತು, ಅತ್ತ ಆಯೋಜಕರೂ ಅವರಿಗೆ ಸೂಚನೆ ನೀಡುವುದನ್ನು ಮರೆತು ಅಶ್ಲೀಲ ನೃತ್ಯ‌ ಪ್ರದರ್ಶನ ಮಾಡಿಸಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net