ಮಗಳ ಪ್ರಿಯಕರನ ಕೊಂದು ಜೈಲು ಸೇರಿದ ಅಪ್ಪ-ಅಮ್ಮ! ಎಲ್ಲವನ್ನೂ ಕಳೆದುಕೊಂಡಾಕೆ ಕೊನೆಗೂ ಬದುಕಲಿಲ್ಲ

love case
ಮಾನ್ವಿತಾ ಮತ್ತು ದರ್ಶನ್​
Published on

ಮಂಡ್ಯ: ಇದು ಅಪ್ರಾಪ್ತರಿಬ್ಬರ ಪ್ರೀತಿ ದುರಂತ ಅಂತ್ಯಕಂಡ ಸ್ಟೋರಿ. ಮಗಳ ಪ್ರೇಮ ಪ್ರಕರಣ ಸಂಬಂಧ 17 ವರ್ಷದ ಬಾಲಕನನ್ನು ತನ್ನ ಮನೆಗೆ ಕರೆಸಿಕೊಂಡ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರೊಬ್ಬರು ಆತನನ್ನು ಕೊಂದು ಜೈಲು ಸೇರಿದ್ದ. ಅತ್ತ ಬಾಲಮಂದಿರ ಸೇರಿದ್ದ ಬಾಲಕಿ, ನಿನ್ನೆ(ಆ.31) ಅಲ್ಲೇ ನೇಣುಬಿಗಿದುಕೊಂಡು ಸತ್ತಿದ್ದಾಳೆ.

ಮಂಡ್ಯ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು ಅವರ 17 ವರ್ಷದ ಮಗಳು ಮಾನ್ವಿತಾ ಮತ್ತು ಕಲ್ಲಹಳ್ಳಿಯ 17 ವರ್ಷದ ಬಾಲಕ ದರ್ಶನ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದ ಶಿವಲಿಂಗು​, ಏ.24ರ ರಾತ್ರಿ ಮಗಳ ಪ್ರಿಯಕರನನ್ನು ತನ್ನ ಮನೆಗೆ ಕರೆಸಿಕೊಂಡು ತನ್ನ ಕುಟುಂಬಸ್ಥರೊಂದಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಗಂಭೀರ ಗಾಯಗೊಂಡಿದ್ದ ದರ್ಶನ್​, ಏ.25ರಂದು ಮೃತಪಟ್ಟಿದ್ದ. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಕಲ್ಲಹಳ್ಳಿ ಬಡಾವಣೆ ಅಕ್ಷರಶಃ ಬೆಚ್ಚಿಬಿದ್ದಿತ್ತು. ಊರಲ್ಲಿ ಪ್ರಕ್ಷ್ಯುಬ್ಧ ವಾತಾವರಣ ನಿರ್ಮಾಣವಾಗಿತ್ತು. ಮೃತನ ಸಂಬಂಧಿಕರು ಬಾಲಕಿ ಮನೆ ಎದುರು ಪ್ರತಿಭಟನೆ ನಡೆಸಿದ್ದರು. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಬಾಲಕಿ ತಂದೆ ಶಿವಲಿಂಗು, ತಾಯಿ ಅನುರಾಧ‌ ಸೇರಿದಂತೆ 17 ಜನರ ವಿರುದ್ಧ ಕೇಸ್​ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದರು.

ಬಳಿಕ ಮಾನ್ವಿತಾಳನ್ನು ಮಂಡ್ಯದ ಕಲ್ಲಹಳ್ಳಿ ಬಾಲಕಿಯರ ಬಾಲ ಮಂದಿರದಲ್ಲಿ ಇರಿಸಲಾಗಿತ್ತು. ಪ್ರಿಯಕರನ ಸಾವು, ಹೆತ್ತವರು ಜೈಲು ಸೇರಿದ್ದ ವಿಚಾರದಿಂದ ಮನನೊಂದಿದ್ದ ಬಾಲಕಿ ಖಿನ್ನತೆಗೆ ಒಳಗಾಗಿದ್ದಳು. ನಿನ್ನೆ(ಆ.31) ರಂದು ಬಾಲ ಮಂದಿರಲ್ಲೇ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸತ್ತಿದ್ದಾಳೆ. ಹೆತ್ತವರು ಜೈಲಿನಲ್ಲಿದ್ದ ಕಾರಣ ನಿನ್ನೆ ಅಂತ್ಯಕ್ರಿಯೆ ನೆರವೇರಿರಲಿಲ್ಲ. ನಿನ್ನೆಯಿಂದ ಮಂಡ್ಯ ಮೆಡಿಕಲ್ ಕಾಲೇಜಿನ ಶವಾಗಾರದಲ್ಲೇ ಬಾಲಕಿ ಮೃತದೇಹ ಇತ್ತು. ಮಗಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಜೈಲಿನಿಂದ ಅನುಮತಿ ಪಡೆದು ಹೊರ ಬಂದ ಮಾನ್ವಿತಾಳ ಹೆತ್ತವರು, ಮಗಳ ಅಮತಿಮ ದರ್ಶನ ಪಡೆದು ಕಣ್ಣೀರಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net