

ಮಂಡ್ಯ: ಗ್ರಾಮ ದೇವತೆ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಕೊಂಡೋತ್ಸವದಲ್ಲಿ ಕೊಂಡ ಹಾಯುವ ವೇಳೆ ಅರ್ಚಕ ಮುಗ್ಗರಿಸಿ ಬಿದ್ದು ಗಾಯಗೊಂಡ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿ ತಮ್ಮಡಹಳ್ಳಿ ಗ್ರಾಮದಲ್ಲಿ ಮೂಕಮಾರಮ್ಮ ದೇವಿ ಹಬ್ಬದ ಕೊಂಡೋತ್ಸವದಲ್ಲಿ ಈ ಅವಘಡ ಸಂಭವಿಸಿದೆ. ಕೊಂಡಕ್ಕೆ ಬಿದ್ದು ಗಾಯಗೊಂಡ ಅರ್ಚಕರ ಹೆಸರು ನಿಂಗರಾಜು. ಕೊಂಡಕ್ಕೆ ಬಿದ್ದ ತಕ್ಷಣ ಸ್ಥಳದಲ್ಲಿದ್ದ ಭಕ್ತರು ಪೂಜಾರಿಯನ್ನು ರಕ್ಷಿಸಿದ್ದಾರೆ. ಪೂಜಾರಿ ಅವರ ದೇಹದಲ್ಲಿ ತೀವ್ರ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.