ಮಂಡ್ಯದಲ್ಲಿ ಐವರ ಕೊಲೆ: ನಮ್ಮಿಬ್ಬರಿಗೂ ಆಫೇರ್ ಇತ್ತು, ಪಂಚಾಯ್ತಿ ಮಾಡಿ ಸೀರೆ ಹಾಕಿಸಿದ್ರು… ಸ್ಫೋಟಕ ರಹಸ್ಯ ಬಾಯ್ಬಿಟ್ಟ ಮೃತಳ ಗಂಡ

mandya murde case
Published on

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಗ್ರಾಮದಲ್ಲಿ ಫೆ.5ರ ತಡರಾತ್ರಿ ನಡೆದ ನಾಲ್ವರು ಮಕ್ಕಳು ಸೇರಿ ಐವರ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಈ ಐವರನ್ನೂ ಅಮಾನುಷವಾಗಿ ಕೊಂದ ಲಕ್ಷ್ಮೀ ಎಂಬಾಕೆಯನ್ನ ಪೊಲೀಸರು ಬಂಧಿಸಿದ್ದು, ಬೆಚ್ಚಿಬೀಳಿಸೋ ರಹಸ್ಯ ಬಯಲಾಗಿದೆ.

'ನನ್ನ ಪತ್ನಿ, ನನ್ನ ಮೂವರು ಮಕ್ಕಳು ಹಾಗೂ ನನ್ನ ಅಣ್ಣನ ಮಗನನ್ನು ಕೊಂದ ಲಕ್ಷ್ಮೀ ನನ್ನ ಸಂಬಂಧಿ. ಆಕೆ ಬಾಲ್ಯದಲ್ಲೇ ಶಿಕ್ಷಕರೊಬ್ಬರ ಜತೆ ಓಡಿ ಹೋಗಿದ್ದಳು. ನನಗೆ ಬೇರೊಬ್ಬರ ಜತೆ ಮದ್ವೆ ಆಯ್ತು. ಬಳಿಕ ಆಕೆಗೂ ಬೇರೊಬ್ಬನ ಜತೆ ಮದುವೆ ಆಯ್ತು. ನನಗೆ ಮದ್ವೆ ಆಗಿ ಹೆಂಡ್ತಿ -ಮಕ್ಕಳು ಇದ್ದರೂ ಆಕೆ ನನನ್ನು ಇಷ್ಟ ಪಡುತ್ತಿದ್ದಳು. ನಮ್ಮಿಬ್ಬರ ನಡುವೆ ಆಫೇರ್ ಇತ್ತು. ಈ ವಿಚಾರ ಗೊತ್ತಾಗಿ ಹಿರಿಯರೆಲ್ಲ ನ್ಯಾಯ ಪಂಚಾಯ್ತಿ ಮಾಡಿ ಸೀರೆ ಹಾಕಿಸಿದ್ದರು‌. ನಮ್ಮ ಸಂಪ್ರದಾಯದ ಪ್ರಕಾರ ಸೀರೆ ಹಾಕಿದರೆ ಅಣ್ಣ-ತಂಗಿ ಆಗುತ್ತೇವೆ. ಸೀರೆ ಹಾಕಿದ ಬಳಿಕ ನಾನು ನನ್ನ ಪಾಡಿಗೆ ಹೆಂಡ್ತಿ-ಮಕ್ಕಳ ಜತೆ ಇದ್ದೆ. ಆದರೂ ಬಿಡದ ಆಕೆ, ಬೇರೆ ನಂಬರ್​ನಿಂದ ಕಾಲ್​​ ಮಾಡಿ ನನಗೆ ಮತ್ತು ನನ್ನ ಪತ್ನಿಗೆ ಟಾರ್ಚರ್ ಕೊಡ್ತಿದ್ಲು. ಅದು ನನ್ನ ಸಂಬಂಧಿ ಲಕ್ಷ್ಮಿಯೇ ಅನ್ನೋದು ಮಾತ್ರ ನನಗೆ ಗೊತ್ತಿರಲಿಲ್ಲ. ನಾನು ನನ್ನ ಹೆಂಡತಿ- ಮಕ್ಕಳೊಂದಿಗೆ ಚೆನ್ನಾಗಿದ್ದೆ. ಈಗ ಅವರನ್ನೆಲ್ಲ ಈಕೆ ಯಾಕೆ ಕೊಲೆ ಮಾಡಿದಳೋ ಗೊತ್ತಿಲ್ಲ...' ಎಂದು ಮೃತಳ ಗಂಡ ಗಂಗಾರಾಮ್​ ಬುಧವಾರ ಗೋಳಾಡುತ್ತಿದ್ದರು.

ಪತ್ನಿ ಜತೆ ಗಂಗಾರಾಮ್​
ಪತ್ನಿ ಜತೆ ಗಂಗಾರಾಮ್​

ಕೊಲೆ ಆರೋಪಿ ಲಕ್ಷ್ಮೀಗೆ ಮದ್ವೆಯಾಗಿ ಇಬ್ಬರು ಮಕ್ಕಳಿದ್ದರೂ ತನ್ನ ಚಿಕ್ಕಪ್ಪನ ಮಗಳು ಲಕ್ಷ್ಮಮ್ಮಳ ಗಂಡ ಗಂಗಾರಾಮ್​ ಮೇಲೆ ವ್ಯಾಮೋಹವಿತ್ತು. ಈಕೆ ಜತೆಗಿನ ಅಕ್ರಮ ಸಂಬಂಧ ಮುಂದುವರಿಸಲು ಗಂಗಾರಾಮ್ ಒಲ್ಲೆ ಎಂದಿದ್ದಕ್ಕೆ ಕುಪಿತಗೊಂಡ ಲಕ್ಷ್ಮೀ, ತನ್ನ ತಂಗಿಯನ್ನೇ ಮುಗಿಸಲು ಸಂಚು ರೂಪಿಸಿದ್ದಳು. ಇದ್ಐಆವುದರ ಪರಿವೇ ಇಲ್ಲದ ಗಂಗಾರಾಮ್​ ವ್ಯಾಪಾರಕ್ಕೆಂದು ಬೇರೆ ಊರಿಗೆ ತೆರಳಿದ್ದ. ಫೆ.5ರ ರಾತ್ರಿ ಕೆ.ಆರ್​.ಎಸ್​. ಗ್ರಾಮದ ಬಜಾರ್​ ಲೈನ್​ನಲ್ಲಿರುವ ಗಂಗಾರಾಮ್ ಮನೆಗೆ ಮೈಸೂರಿಂದ ಬಂದ ಲಕ್ಷ್ಮೀ, ಮನೆಯಲ್ಲಿದ್ದ ಗಂಗಾರಾಮ್​ನ ಪತ್ನಿ ಲಕ್ಷ್ಮಮ್ಮ(30) ಮತ್ತು ಇವರ ಮಕ್ಕಳಾದ ರಾಜ್​(12), ಕೋಮಲ್​(8), ಕುನಾಲ್​(5) ಹಾಗೂ ಗಂಗಾರಾಮ್​ ಅವರ ಸಹೋದರನ ಮಗ ಗೋವಿಂದ(10) ಸೇರಿ ಐವರನ್ನೂ ಭೀಕರವಾಗಿ ಕೊಂದು, ಮೂರ್ನಾಲ್ಕು ತಾಸು ಶವಗಳ ಜತೆಯೇ ಇದ್ದು ಬಳಿಕ ಸ್ಕೂಟರ್​ನಲ್ಲಿ ಮೈಸೂರಿಗೆ ತೆರಳಿದ್ದಳು. ಮರುದಿನ ಬೆಳಗ್ಗೆ ಏನೂ ಗೊತ್ತಿಲ್ಲದಂತೆ ಶವಗಳ ಬಳಿ ಕಣ್ಣೀರಿಟ್ಟಿದ್ದಳು. ಪ್ರಿಯತಮನನ್ನು ಪಡೆಯುವ ದುರಾಸೆಗೆ ಇಡೀ ಕುಟುಂಬವನ್ನೇ ಬಲಿ ಪಡೆದ ಕಿರಾತಕಿಯ ಸುಳಿವು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕೊಲೆ ಬಳಿಕ ಲಕ್ಷ್ಮೀ ಸ್ಕೂಟರ್​ನಲ್ಲಿ ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಇದರ ಜಾಡು ಹಿಡಿದ ಹೊರಟ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net