

ತುಮಕೂರು: ತೋಟವೊಂದರಲ್ಲಿ ಮರ ಕಡಿಯಲು ಹೋಗಿದ್ದ ವ್ಯಕ್ತಿ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬಗ್ಗನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸಂಭವಿಸಿದೆ.
ಹೊಸಪಾಳ್ಯ ಗ್ರಾಮದ ಲೋಕೇಶ್(45) ಮೃತ ದುರ್ದೈವಿ. ಸೋಮವಾರ ಸಂಜೆ ಗೊಲ್ಲರಹಟ್ಟಿಯ ತೋಟವೊಂದರಲ್ಲಿ ಮರ ಕಡಿಯುವ ಕೆಲಸಕ್ಕೆ ಲೋಕೇಶ್ ತೆರಳಿದ್ದರು.
ಮರ ಹತ್ತಿದ್ದ ಲೋಕೇಶ್, ಬಹುತೇಕ ಕೊಂಬೆಗಳನ್ನು ಕತ್ತರಿಸಿದ್ದರು. ಅಷ್ಟರಲ್ಲಿ ಕಾಲು ಜಾರಿ ಕೆಳಗೆ ಬಿದ್ದು ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾರೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.