ಪತ್ನಿಗೆ ಬೆಳಗ್ಗೆ ತಲಾಕ್​ ಕೊಟ್ಟು ಸಂಜೆ ಕತ್ತು ಕೊಯ್ದು ಕೊಲೆ ಮಾಡಿದ ವ್ಯಕ್ತಿಯ ಉದ್ದೇಶವೇನಿತ್ತು?

Wife Murder
Published on

ಬೆಂಗಳೂರು: ಪತ್ನಿಗೆ ಬೆಳಗ್ಗೆ ತಲಾಕ್​ ಕೊಟ್ಟು ಸಂಜೆ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ ಎನ್ನಲಾದ ಘಟನೆ ಜೆಪಿ ನಗರದ ವಿಕಾಸ್ ಎನ್​ಕ್ಲೇವ್ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ.

ಘಟನೆ ಬುಧವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಜ್ನೀನ್ ಮೃತ ದುರ್ದೈವಿ. ಕಲೀಂ ಶರೀಫ್​ ಆರೋಪಿ ಪತಿ. ಗಂಡ-ಹೆಂಡತಿ ನಡುವೆ ಪ್ರತಿನಿತ್ಯ ಹಣದ ವಿಚಾರವಾಗಿ ಜಗಳ ನಡೆಯುತ್ತಿತ್ತಂತೆ. ಅ್ಲಲದೆ, ಕಲೀಂ ತನ್ನ ಹೆಂಡತಿ ಮೇಲೆ ಅನುಮಾನ ಪಡುತ್ತಿದ್ದ ಎಂದು ಹೇಳಲಾಗಿದೆ.

ಈ ಎರಡು ವಿಚಾರಕ್ಕೆ ಇಬ್ಬರು ಕಿತ್ತಾಡುತ್ತಿದ್ದರು. ಕೊಲೆಯಾದ ಬೆಳಗ್ಗೆ ಗಂಡ-ಹೆಂಡತಿ ಇಬ್ಬರೂ ಬನ್ನೇರುಘಟ್ಟ ರಸ್ತೆಯಲ್ಲಿನ ಮಸೀದಿಗೆ ತರಳಿ ತಲಾಕ್ ತೆಗೆದುಕೊಂಡಿದ್ದರು. ಆದ್ರೆ, ಮನೆಗೆ ಬಂದ ಕಲೀಂ ಜಗಳ ತೆಗೆದಿದ್ದ, ಇದು ತಾರಕಕ್ಕೇರಿ ಕಲೀಂ ಚಾಕುವಿನಿಂದ ಕತ್ತು ಕುಯ್ದು ಕೊಲೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ಪುಟ್ಟೇನಹಳ್ಳಿ ಪೊಲೀಸರು ಬಂದು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ಕಲೀಂನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net