ಕಳ್ಳತನಕ್ಕೆ ಬಂದು ಮಾಡಿದ್ದೇ ಬೇರೆ, ಇಡೀರಾತ್ರಿ ಮಳವಳ್ಳಿಯ ಅಂಗನವಾಡಿಯಲ್ಲೇ ಇದ್ದು ಸುಳಿವೊಂದನ್ನು ಬಿಟ್ಟು ಹೋದ...

mandya theft anganawadi
Published on

ಮಳವಳ್ಳಿ: ರಾತ್ರೋರಾತ್ರಿ ಅಂಗನವಾಡಿ ಕೇಂದ್ರದ ಬಾಗಿಲ ಬೀಗ ಒಡೆದು ಒಳ ನುಗ್ಗಿದ ಕಳ್ಳನೊಬ್ಬ ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿದ್ದಾನೆ. ನಂತರ ಅಲ್ಲೇ ಇದ್ದ ಪುಸ್ತಕದಲ್ಲಿ ಬರೋಬ್ಬರಿ 3 ಪುಟದಲ್ಲಿ ತನ್ನ ಅನಿಸಿಕೆಯನ್ನ ಕಥೆ, ಕವನ ರೂಪದಲ್ಲಿ ಬರೆದಿಟ್ಟು ಹೋಗಿದ್ದಾನೆ!

ಇಂತಹ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಗ್ರಾಮದ ಶಿಂಷಾ ಮುಖ್ಯ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕಳವು ಮಾಡಲು ಯತ್ನಿಸಿರುವ ಕಳ್ಳ, ಬೀರುವಿನ ಬೀಗ ಮುರಿದಿದ್ದಾನೆ. ಆದರೆ, ಅಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗದಿದ್ದಾಗ ಅಲ್ಲೇ ಇದ್ದ ಅಡುಗೆ ಸಾಮಗ್ರಿ ತೆಗೆದುಕೊಂಡು ಗ್ಯಾಸ್​ಸ್ಟೌ ಹಚ್ಚಿ ಪುಳಿಯೋಗರೆ ತಯಾರಿಸಿಕೊಂಡು ತಿಂದಿದ್ದಾನೆ. ನಂತರ ನೋಟ್​ ಪುಸ್ತಕವೊಂದರಲ್ಲಿ ದುಂಡು ದುಂಡು ಅಕ್ಷರಗಳಲ್ಲಿ ಮೂರು ಪುಟಗಳಲ್ಲಿ ದಿನಚರಿ, ತನಗಾಗಿರುವ ಅನುಭವಗಳನ್ನು ಕವನ, ಕಥೆ ರೂಪದಲ್ಲಿ ಓತಪ್ರೋತವಾಗಿ ಬರೆದು ಜಾಗ ಖಾಲಿ ಮಾಡಿದ್ದಾನೆ.

ಕಳ್ಳ ಬರೆದಿಟ್ಟ ಕವನ
ಕಳ್ಳ ಬರೆದಿಟ್ಟ ಕವನ

ಸೋಮವಾರ ಬೆಳಗ್ಗೆ ಎಂದಿನಂತೆ ಅಂಗನವಾಡಿ ಕಾರ್ಯಕರ್ತೆ ಶಿಲ್ಪಾ ಕೇಂದ್ರದ ಬಾಗಿಲು ತೆರೆಯಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಪಂಡಿತಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮಹದೇವು ಸ್ಥಳ ಪರಿಶೀಲಿಸಿ ಗ್ರಾಮಾಂತರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಅ.ಗನವಾಡಿಯಲ್ಲಿ ಕಳ್ಳ ಬರೆದಿಟ್ಟ ಕಥೆ
ಅ.ಗನವಾಡಿಯಲ್ಲಿ ಕಳ್ಳ ಬರೆದಿಟ್ಟ ಕಥೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net