ಹಳೇ ವೈಷಮ್ಯಕ್ಕೆ ಮಚ್ಚಿನಿಂದ ಹಲ್ಲೆ

FotoJet
Published on

ಚಿಂತಾಮಣಿ: ತಾಲೂಕಿನ ಕೆಂಚಾರ‌್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅನುಪಲ್ಲಿ ಗ್ರಾಮದಲ್ಲಿ ಹಳೇ ವೈಷಮ್ಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಮಂಜುನಾಥರೆಡ್ಡಿ(46) ಹಲ್ಲೆಗೊಳಗಾದವ. ಶಿವಾರೆಡ್ಡಿ ಆರೋಪಿ. ಮಂಜುನಾಥ್‌ರೆಡ್ಡಿ ಹಾಗೂ ಶಿವಾರೆಡ್ಡಿ ಅವರ ಜಮೀನು ಅಕ್ಕಪಕ್ಕ ದಲ್ಲಿದ್ದು, ಜಮೀನಿನ ವಿಚಾರದಲ್ಲಿ ಇಬ್ಬರ ನಡುವೆ ಹಳೇ ವೈಷಮ್ಯವಿತ್ತು. ಗುರುವಾರ ಮಂಜುನಾಥ್ ರೆಡ್ಡಿ ಗ್ರಾಮಸ್ಥ ರೊಂದಿಗೆ ಮಾತನಾಡುತ್ತಾ ನಿಂತಿದ್ದ ವೇಳೆ ಶಿವಾರೆಡ್ಡಿ ಏಕಾಏಕಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ತಲೆಗೆ ತೀವ್ರಗಾಯವಾದ ಹಿನ್ನೆಲೆಯಲ್ಲಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಶುಕ್ರವಾರ ರಾತ್ರಿ ಕೆಂಚಾರ‌್ಲಹಳ್ಳಿ ಠಾಣೆಯಲ್ಲಿ ಮಂಜುನಾಥ್‌ರೆಡ್ಡಿ ದೂರು ದಾಖಲಿಸಿದ್ದಾರೆ. ಪೊಲೀಸರು ಶಿವಾರೆಡ್ಡಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net