

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಗಟಾರಕ್ಕೆ ಉರುಳಿದ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಬಳಗಾರ ಕ್ರಾಸ್ ಬಳಿ ಶುಕ್ರವಾರ ನಡೆದಿದೆ.
ಕಬ್ಬಿಣದ ವಸ್ತುಗಳನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಸಾಗಿಸುತ್ತಿದ್ದ ಲಾರಿ, ಬಳಗಾರ ಕ್ರಾಸ್ನ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗಟಾರದಲ್ಲಿ ಪಲ್ಟಿಯಾಗಿದೆ. ಕಬ್ಬಿಣದ ರಾಡ್ಗಳು ನೆಲಕ್ಕುರುಳಿವೆ. ಲಾರಿ ಜಖಂಗೊಂಡಿದೆ.
ಚಾಲಕ-ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.