

ಮುಂಡಗೋಡ: ಪರವಾನಗಿಗಿಂತ ಹೆಚ್ಚು ಸಾಗವಾನಿ ಕಟ್ಟಿಗೆ ಸಾಗಿಸುತ್ತಿದ್ದ ಲಾರಿಯನ್ನು ವಡಗಟ್ಟ ತನಿಖಾ ಠಾಣೆಯ ಬಳಿ ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಿದ ಶಿರಸಿ ಮಾರ್ಗವಾಗಿ ತಾಲೂಕಿನ ಪಾಳಾ ಗ್ರಾಮಕ್ಕೆ ಲಾರಿಯಲ್ಲಿ ಪರವಾನಗೆಗಿಂತ ಅಧಿಕ ಸಾಗವಾನಿ ಎಳೆಗಳನ್ನು ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರಗೆ ತಾಲೂಕಿನ ವಡಗಟ್ಟ ಚೆಕ್ ಪೋಸ್ಟ್ ಬಳಿ ಲಾರಿ ತಡೆದು ತಪಾಸಣೆ ನಡೆಸಿದಾಗ 130 ಸಾಗವಾನಿ ಎಳೆಗಳನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಕಟ್ಟಿಗೆ ಸಮೇತ ಲಾರಿ ಹಾಗೂ ಚಾಲಕ ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದ ಚಂದ್ರು ಲಿಂಬಣ್ಣ ಲಮಾಣಿ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.
ಯಲ್ಲಾಪುರದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಎಸ್.ಜಿ. ಹೆಗಡೆ, ಎಸಿಎಫ್. ರವಿ ಹುಲಕೋಟಿ, ವಲಯ ಅರಣ್ಯಾಧಿಕಾರಿ ವಾಗೇಶ ಬಿ.ಜ.ೆ, ಉಪವಲಯ ಅರಣ್ಯಾಧಿಕಾರಿ ಶ್ರೀಕಾಂತ ವೆರ್ಣೆಕರ, ಅರುಣಕುಮಾರ ಕಾಶಿ, ಫಕೀರೇಶ ಸುಣಗಾರ, ಗಸ್ತು ಅರಣ್ಯ ಪಾಲಕ ಮರ್ದಾನಅಲಿ ಕಳಸ, ಸಿಬ್ಬಂದಿ ಪ್ರಕಾಶ ಮೊಸಳಗಿ ದಾಳಿಯಲ್ಲಿ ಇದ್ದರು.