

ಯಾದಗಿರಿ: ರಸ್ತೆಬದಿ ನಿಂತಿದ್ದ ಲಾರಿಗೆ ಡಿವೈಎಸ್ಪಿ ಪ್ರಯಾಣಿಸುತ್ತಿದ್ದ ಸರ್ಕಾರಿ ವಾಹನ ಡಿಕ್ಕಿ ಹೊಡೆದಿದ್ದು, ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಶಹಾಪುರ ನಗರದ ಸುಬೇದಾರ್ ಆಸ್ಪತ್ರೆ ಬಳಿ ಸೋಮವಾರ ಬೆಳಗಿನ ಜಾವ ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ ಇದ್ದ ಸರ್ಕಾರಿ ವಾಹನ ಲಾರಿಗೆ ಡಿಕ್ಕಿಯಾಗಿದೆ.
ಡಿವೈಎಸ್ಪಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರ ಜತೆ ಇದ್ದ ಉಪ ಕಾನ್ಸ್‌ಟೇಬಲ್ ಉಮಾಕಾಂತ್ ಹಾಗೂ ವಾಹನ ಚಾಲಕ ಚಂದಪ್ಪಗೌಡ ಅವರಿಗೂ ಗಾಯಗಳಾಗಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.