

ಬೆಂಗಳೂರು: ರಾಜ್ಯದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ 2022-23ನೇ ಸಾಲಿನಲ್ಲಿ ಉನ್ನತ ವ್ಯಾಸಂಗ ಮಾಡಲು ಶೈಕ್ಷಣಿಕ ಸಾಲ ಸೌಲಭ್ಯಕ್ಕಾಗಿ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನಿಗಮವು ವಾರ್ಷಿಕ 3.50 ಲಕ್ಷ ರೂ. ಗಳಂತೆ ಕೋರ್ಸ್ನ ಅವಧಿಗೆ ಗರಿಷ್ಠ 10 ಲಕ್ಷ ರೂ. ಸಾಲವನ್ನು ಶೇ.2ರ ಬಡ್ಡಿ ದರದಲ್ಲಿ ಮಂಜೂರು ಮಾಡಲಿದೆ. ಆಸಕ್ತ ವಿದ್ಯಾರ್ಥಿಗಳು ನ.30ರೊಳಗೆ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಮಾಸ್ಟರ್ಸ್ ಡಿಗ್ರಿ (ಎಂ.ಡಿ) ಮಾಡಲಿಚ್ಛಿಸುವ ಶೇ.60ಕ್ಕಿಂತ ಅಧಿಕ ಅಂಕ ಗಳಿಸಿರುವ 25 ವರ್ಷದೊಳಗಿನವರು. ಪಿಎಚ್ಡಿ ಮಾಡಲು ಬಯಸುವ ಮಾಸ್ಟರ್ಸ್ ಡಿಗ್ರಿಯಲ್ಲಿ ಶೇ.60ಕ್ಕಿಂತ ಅಧಿಕ ಅಂಕ ಗಳಿಸಿರುವ ಹಾಗೂ ಪೋಸ್ಟ್ ಡಾಕ್ಟರಲ್ ಮಾಡಲು ಇಚ್ಛಿಸುವ ಮಾಸ್ಟ್ರರ್ಸ್ ಡಿಗ್ರಿ/ಪಿಎಚ್ಡಿಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದಿರುವ 27 ವರ್ಷದ ಒಳಗಿನವರು ಸೌಲಭ್ಯ ಪಡೆಬಹುದು. ವಿವರಗಳಿಗೆ ನಿಗಮದ ಜಾಲತಾಣ https://kvcdc.karnataka.gov.in/ ಅಥವಾ ದೂ: 080-29904268 ಹಾಗೂ ಇ-ಮೇಲ್ mdkvcdc@gmail.com ವಿಳಾಸ ಸಂಪರ್ಕಿಸಬಹುದು.