ಎನ್ನೆಸ್ಸೆಸ್‌ನಿಂದ ಸ್ವಾವಲಂಬನೆಯ ಪಾಠ

kota (1)
Published on

ಕೋಟ: ಇಂದಿನ ಯುವ ಜನಾಂಗ ಪ್ರತಿಯೊಂದು ಕೆಲಸಕ್ಕೂ ಬೇರೆಯವರನ್ನು ಅವಲಂಬಿಸುತ್ತಿದೆ. ಆದರೆ ಎನ್ನೆಸ್ಸೆಸ್ ಶಿಬಿರಗಳು ನಮಗೆ ಜೀವನ ಪಾಠವನ್ನು ಕಲಿಸುವುದರಿಂದ ಪರಾವಲಂಬನೆಯಿಂದ ಸ್ವಾವಲಂಬನೆಯ ಪಾಠ ಸಿಗುತ್ತದೆ ಎಂದು ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಹೇಳಿದರು.

ಕೋಟ ಪಡುಕರೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್ ಘಟಕ ಆಶ್ರಯದಲ್ಲಿ ಕೋಟತಟ್ಟು ಸ.ಹಿ.ಪ್ರಾ. ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಎನ್ನೆಸ್ಸೆಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಮಾತನಾಡಿ, ಶಿಬಿರಾರ್ಥಿಗಳು ಶಿಬಿರದ ಪ್ರತಿಯೊಂದು ಕ್ಷಣಗಳನ್ನು ಅನುಭವಿಸಿ ಜೀವನ ಪಾಠ ತಿಳಿಯುವಂತೆ ತಿಳಿಸಿದರು. ಕಾಲೇಜು ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ ಅಧ್ಯಕ್ಷತೆ ವಹಿಸಿ ಶಿಬಿರದ ರೂಪುರೇಷೆ ತಿಳಿಸಿದರು.

ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಕೆ.ಸತೀಶ ಕುಂದರ್, ಸದಸ್ಯ ರವೀಂದ್ರ ತಿಂಗಳಾಯ, ಕೋಟತಟ್ಟು ಶಾಲಾ ಮುಖ್ಯಶಿಕ್ಷಕಿ ಜಾನಕಿ, ಎಸ್‌ಡಿಎಂಸಿ ಅಧ್ಯಕ್ಷ ಸುಲೈಮಾನ್, ಹಳೇ ವಿದ್ಯಾರ್ಥಿಗಳ ಸಂಘ ಅಧ್ಯಕ್ಷ ಸುದಿನ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಮೇಶ್ ಆಚಾರ್ಯ, ಉಪನ್ಯಾಸಕ ಡಾ.ಸುಬ್ರಹ್ಮಣ್ಯ ಎ. ಇದ್ದರು. ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾರ್ಥಿ ಡಾ.ಪ್ರಕಾಶ್ ಕೆ. ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕೀರ್ತನಾ, ತ್ರಿಷಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net